ಕಬಿನಿ ಜಲಾಶಯದ ಒಳಹರಿವು ಹೆಚ್ಚಳ
ಮೈಸೂರು : ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕೇರಳದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.
ಇದರಿಂದಾಗಿ ಕಬಿನಿ ನದಿಯಲ್ಲಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ಕಬಿನಿ ಜಲಾಶಯ ಒಟ್ಟು 2284 ಅಡಿ ಸಾಮಥ್ರ್ಯ ಹೊಂದಿದ್ದು, ಇಂದಿನ ನೀರಿನ ಮಟ್ಟ 2265.60 ಅಡಿಗಳು.
ಜಲಾಶಯದ ಇಂದಿನ ಒಳಹರಿವು 6,407 ಕ್ಯೂಸೆಕ್ಸ್ ಇದ್ದು, ಹೊರಹರಿವು 700 ಕ್ಯೂಸೆಕ್ಸ್ ಇದೆ.








