ಶ್ರೀರಂಗಪಟ್ಟಣದಲ್ಲಿ ಹೆಚ್ಚಿದ ಕೊರೊನಾ ಪಾಸಿಟಿವ್ Saaksha Tv
ಮಂಡ್ಯ: ತಮಿಳುನಾಡಿನ ಓಂ ಶಕ್ತಿಗೆ ಹೋಗಿ ಬಂದ ಭಕ್ತರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕ ಮನೆಮಾಡಿರುವ ಮದ್ಯೆ, ಈಗ ಮತ್ತೆ ಶ್ರೀರಂಗಪಟ್ಟಣದಲ್ಲಿ ಕೊರೋನಾ ಸ್ಪೋಟಗೊಳ್ಳುತ್ತಿದೆ. 74 ಜನರಿಗೆ ಕೊರೊನಾ ಸೊಂಕು ಹರಡಿರುವುದು ದುರದೃಷ್ಟಕರ ಸಂಗತಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ನೀಡಿದ್ದಾರೆ.
ಅಲ್ಲದೇ ಜಿಲ್ಲಾಡಳಿತ ತಕ್ಷಣವೇ ಇದರ ಕುರಿತು ಕ್ರಮಗಳನ್ನು ಕೈಗೊಳ್ಳುವ ಕಾರ್ಯ ಮಾಡಬೇಕು. ತುರ್ತಾಗಿ ಸಭೆಯನ್ನು ಮಾಡಿ ಅಗತ್ಯ ನಿಯಮಗಳನ್ನು ಜಾರಿಗೊಳಿಸಬೇಕು. ಈಗಾಗಲೇ ಶ್ರೀರಂಗಪಟ್ಟಣದಿಂದ 24ಕ್ಕೂ ಹೆಚ್ಚು ಬಸ್ ಗಳು ಓಂ ಶಕ್ತಿ ದೇಗುಲಕ್ಕೆ ಹೊಗಿದ್ದಾರೆ ಅವರಿಗೆ ಕೊವಿಡ್ ಟೆಸ್ಟ್ ಮಾಡಿಸಿ ಮನೆಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು.