ಉಡುಪಿಯಲ್ಲಿ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಹೆಚ್ಚಿದ ಕೊರೊನಾ Saaksha Tv
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಮುಖ್ಯವಾಗಿ ಸೋಂಕು ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಜಿಲ್ಲೆಯಲ್ಲಿ ಆತಂಕದ ಛಾಯೆ ಮೂಡಿದೆ.
ಕಳೆದ ಒಂದು ವಾರದ ಅಂಕಿ ಅಂಶದ ಪ್ರಕಾರ 5 ವರ್ಷದೊಳಗಿನ 49 ಮಕ್ಕಳಲ್ಲಿ, 6 ರಿಂದ 10 ವರ್ಷದೊಳಗಿನ 269, 11 ರಿಂದ 15 ವರ್ಷದೊಳಗಿನ 845, 16 ರಿಂದ 20 ವರ್ಷದೊಳಗಿನ 923 ಮಂದಿಗೆ ಹಾಗೂ 20 ರಿಂದ 25 ವರ್ಷದೊಳಗಿನ 537 ಯುವಕರಲ್ಲಿ ಸೋಂಕು ದೃಢಪಟ್ಟಿದೆ. ಹಾಗೇ ಜನವರಿ 14ರಿಂದ 21ರವರೆಗೆ 25 ವರ್ಷದೊಳಗಿರುವ 4,150 ಯುವಕರಲ್ಲಿ ಕೊರೊನಾ ಧೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶ ನೀಡಿದೆ.
ಇನ್ನೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೀತ, ಕೆಮ್ಮು, ಜ್ವರ ಬಾಧೆ ಹೆಚ್ಚಾಗಿದ್ದು ಪೋಷಕರಲ್ಲಿ ಆತಂಕ ಹೆಚ್ಚಿದೆ. ಶುಕ್ರವಾರ ಜಿಲ್ಲೆಯಲ್ಲಿ 1018 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇದುವರೆಗು ಜಿಲ್ಲೆಯಲ್ಲಿ 84,804 ಜನರಿಗೆ ಸೋಂಕು ತಗುಲಿದ್ದು, 78,484 ಜನ ಗುಣಮುಖರಾಗಿದ್ದಾರೆ. 5,825 ಸಕ್ರೀಯ ಸೊಂಕಿತರಿದ್ದರೆ, ಮೃತರ ಸಂಖ್ಯೆ 495ಕ್ಕೆ ಏರಿಕೆ ಯಾಗಿದೆ ಎಂದು ಇಲಾಖೆ ತಿಳಿಸಿದೆ.