ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ ಹೆಚ್ಚಿದ ಒತ್ತಾಯ – ಪಾಕ್ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ
ಇಸ್ಲಾಮಾಬಾದ್, ಸೆಪ್ಟೆಂಬರ್21: ಪ್ರಧಾನಿ ಇಮ್ರಾನ್ ಖಾನ್ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪಾಕಿಸ್ತಾನದ ವಿರೋಧ ಪಕ್ಷಗಳು ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ಪಾಕ್ ಜನರು ಪಾಕಿಸ್ತಾನದ ಬೀದಿಗಳಲ್ಲಿ ಬೃಹತ್ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಜಾಥಾಗಳು ಮತ್ತು ಪ್ರತಿಭಟನೆಗಳನ್ನು ಪ್ರಾರಂಭಿಸಲು ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿ (ಪಿಡಿಎಂ) ಭಾನುವಾರ ಕರೆ ನೀಡಿತ್ತು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು, ದೇಶದ ಪ್ರಮುಖ ವಿರೋಧ ಪಕ್ಷಗಳು ಒಂದಾಗಿ ಕರೆ ನೀಡಿದೆ. ಇಮ್ರಾನ್ ಖಾನ್ ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸರ್ಕಾರವನ್ನು ಉಚ್ಚಾಟಿಸಲಾಗುವುದು ಎಂದಿರುವ ವಿರೋಧ ಪಕ್ಷಗಳ ಮೈತ್ರಿ ಕೂಟ ದೇಶಾದ್ಯಂತ ಪ್ರತಿಭಟನಾ ಆಂದೋಲನವನ್ನು ನಡೆಸಲು ಪ್ರಾರಂಭಿಸುವುದಾಗಿ ಹೇಳಿತ್ತು.
ಶ್ರೀನಗರ- ಸಿಆರ್‌ಪಿಎಫ್ ಪಡೆ ಮೇಲೆ ಭಯೋತ್ಪಾದಕರ ದಾಳಿ
ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಆಯೋಜಿಸಿದ್ದ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್), ಜಮಿಯತ್ ಉಲೆಮಾ-ಇ-ಇಸ್ಲಾಂ ಭಾಗವಹಿಸಿದ್ದ ಆಲ್ ಪಾರ್ಟೀಸ್ ಕಾನ್ಫರೆನ್ಸ್ (ಎಪಿಸಿ) ಭಾನುವಾರ 26 ಅಂಶಗಳ ಜಂಟಿ ನಿರ್ಣಯವನ್ನು ಅಂಗೀಕರಿಸಿತು.
ಪಿವಿಸಿ ಪೈಪ್‌ಗಳನ್ನು ಬಳಸಿ ಗಡಿಯುದ್ದಕ್ಕೂ ಜಮ್ಮುಕಾಶ್ಮೀರಕ್ಕೆ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನ
ಬಹು ಪಕ್ಷಗಳ ಸಭೆ ಮುಗಿದ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಜಿಯುಐ-ಎಫ್ ಮುಖ್ಯಸ್ಥ ಮುಲಾನಾ ಫಝಲ್ ಉರ್ ರೆಹಮಾನ್ ಈ ನಿರ್ಣಯವನ್ನು ಪ್ರಕಟಿಸಿದರು. ಜೊತೆಗೆ ದೇಶಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಲು ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿ (ಪಿಡಿಎಂ) ಹೆಸರಿನ ಮೈತ್ರಿಯನ್ನು ಪ್ರಾರಂಭಿಸಲು ವಿರೋಧ ಪಕ್ಷಗಳು ಒಪ್ಪಿಕೊಂಡಿವೆ ಎಂದು ಹೇಳಿದರು.








