ಬೆಂಗಳೂರಲ್ಲಿ ಹೆಚ್ಚಿದ ಡ್ರಗ್ಸ್ ಪೆಡ್ಲರ್ಸ್ : ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಕಿಡಿ Drug Peddlers saaksha tv
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್ ಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಡ್ರಗ್ಸ್ ಪೆಡ್ಲರ್ಸ್ ವಿಚಾರವಾಗಿ ಕಾಂಗ್ರೆಸ್ ಟ್ವೀಟ್ ನಲ್ಲಿ.. ಕಾಂಗ್ರೆಸ್ ಅವಧಿಯಲ್ಲಿ ಸಿಲಿಕಾನ್ ಸಿಟಿ ಹಾಗೂ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು, ಬಿಜೆಪಿ ಆಡಳಿತದಲ್ಲಿ ‘ಡ್ರಗ್ಸ್ ಸಿಟಿ’ ಆಗುತ್ತಿದೆ ಎಂದು ದೂರಿದೆ.
ಅಲ್ಲದೆ ಬಿಜೆಪಿಗೂ ಡ್ರಗ್ಸ್ ಪೆಡ್ಲರ್ಗಳಿಗೂ ಇರುವ ನಂಟೇ ಈ ಹಂತಕ್ಕೆ ಬರಲು ಕಾರಣ ಎಂದು ಆರೋಪಿಸಿದೆ. ಅದಾನಿ ಪೋರ್ಟ್ನ ಡ್ರಗ್ಸ್ ಬಗ್ಗೆ ಬಿಜೆಪಿಗರು ಮಾತನಾಡದಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ ಎಂದು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಕುಟುಕಿದೆ.









