ಕೊರೊನಾದಿಂದ ವಯಸ್ಸಾದವರಲ್ಲಿ ಹೆಚ್ಚಿದ ಒಂಟಿತನ, ಆತಂಕ ಮತ್ತು ಪ್ರತ್ಯೇಕತೆಯ ಭಾವನೆಗಳು
ಹೊಸದಿಲ್ಲಿ, ಜುಲೈ 17: ಇತ್ತೀಚಿನ ಸಂಶೋಧನೆಯು ಜನರು ತಮ್ಮ ವೃದ್ಧಾಪ್ಯದಲ್ಲಿ, ವಿಶೇಷವಾಗಿ 70 ರ ವಯಸ್ಸಿನಲ್ಲಿ, ಪ್ರಸ್ತುತ ನಡೆಯುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗದಿಂದ ಹೆಚ್ಚಿನ ಒಂಟಿತನವನ್ನು ಅನುಭವಿಸುತ್ತಿದ್ದಾರೆ ಎಂದು ತೋರಿಸಿದೆ. ವರದಿಯು ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಪ್ರತ್ಯೇಕತೆಯು ಹೇಗೆ ವಯಸ್ಸಾದವರಲ್ಲಿ ಸಮಸ್ಯೆಯನ್ನು ಸೃಷ್ಟಿಸಿದೆ ಎಂದು ತೋರಿಸಿದ್ದು, ಇದನ್ನು ಐರಿಶ್ ಲಾಂಗಿಟ್ಯೂಡಿನಲ್ ಸ್ಟಡಿ ಆನ್ ಏಜಿಂಗ್ (ಟಿಲ್ಡಾ) ಮತ್ತು ಅಲೋನ್ ಸಂಶೋಧಕರು ಜಂಟಿಯಾಗಿ ಪ್ರಕಟಿಸಿದ್ದಾರೆ.
ಸಾಂಕ್ರಾಮಿಕ ರೋಗದಿಂದ ವಯಸ್ಸಾದ ಜನರಲ್ಲಿ ಒಂಟಿತನ, ಆತಂಕ ಮತ್ತು ಪ್ರತ್ಯೇಕತೆಯ ಭಾವನೆಗಳು ಹೆಚ್ಚಿರುವುದನ್ನು ಹೊಸ ದತ್ತಾಂಶದ ದಾಖಲೆಗಳು ಸೂಚಿಸಿದ್ದು, ಕೋವಿಡ್-19 ಸ್ಫೋಟಗೊಳ್ಳುವ ಮೊದಲು ವಯಸ್ಸಾದ ಜನರಲ್ಲಿನ ಒಂಟಿತನ ಮತ್ತು ಪ್ರತ್ಯೇಕತೆಯ ಅನುಭವಗಳೊಂದಿಗೆ ಇದನ್ನು ಹೋಲಿಸಲಾಗಿದೆ. ಭಾವನಾತ್ಮಕ ಯಾತನೆ, ಅವರ ಅರಿವಿನ ಅವನತಿ ಮತ್ತು ದೈಹಿಕ ಅಂಗವೈಕಲ್ಯದಿಂದ ಜನರನ್ನು ರಕ್ಷಿಸಲು ಸಾಮಾಜಿಕ ಸಂಬಂಧಗಳು ಅಗತ್ಯವೆಂದು ಈ ಹಿಂದಿನ ಸಂಶೋಧನೆಗಳು ಬಹಿರಂಗಪಡಿಸಿವೆ.
ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕತೆಯು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ ಎಂದು ಸಹ ಹೇಳಲಾಗಿದೆ.
ಪ್ರೋಬಯಾಟಿಕ್‌ಗಳು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.
ಟಿಲ್ಡಾ ಅಧ್ಯಯನವು ಐರ್ಲೆಂಡ್‌ನಲ್ಲಿ ವಾಸಿಸುವವರ ಅನುಭವಗಳು ಮತ್ತು ಆರೋಗ್ಯ ಪದ್ಧತಿಗಳನ್ನು ಗಣನೆಗೆ ತೆಗೆದುಕೊಂಡಿದೆ. ವಯಸ್ಸಾದ ಜನರ ಮೇಲೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನೇಕ ಪ್ರಮುಖ ಕ್ಷೇತ್ರಗಳ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನೂ ಇದು ಪರಿಶೀಲಿಸಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಂಕ್ರಾಮಿಕ ರೋಗದ ಮೊದಲು 70 ಪ್ರತಿಶತದಷ್ಟು ಜನರು ತಾವು ಎಂದಿಗೂ ಒಂಟಿತನ ಅನುಭವಿಸಲಿಲ್ಲ ಎಂದು ವರದಿ ಮಾಡಿದ್ದಾರೆ. ಶೇಕಡಾ 25 ಕ್ಕಿಂತ ಕಡಿಮೆ ಜನರು ಕೆಲವು ಸಮಯ ಒಂಟಿತನ ಅನುಭವಿಸಿದರೆ, ಕೇವಲ 5 ಪ್ರತಿಶತದಷ್ಟು ಜನರು ಒಂಟಿತನವನ್ನು ಅನುಭವಿಸುತ್ತಿದ್ದಾರೆಂದು ವರದಿ ತಿಳಿಸಿತ್ತು. ಏಕಾಂಗಿಯಾಗಿ ವಾಸಿಸುವವರಲ್ಲಿ 31 ಪ್ರತಿಶತದಷ್ಟು ಜನರು ಒಂಟಿತನ ಅನುಭವಿಸುತ್ತಾರೆ. 32 ಪ್ರತಿಶತದಷ್ಟು ಜನರು ಕೆಲವೊಮ್ಮೆ ಒಂಟಿತನ ಅನುಭವಿಸುತ್ತಾರೆ ಮತ್ತು 37 ಪ್ರತಿಶತದಷ್ಟು ಜನರು ಏಕಾಂಗಿಯಾಗಿರುತ್ತಾರೆ. ಇತರರೊಂದಿಗೆ ವಾಸಿಸುವವರಲ್ಲಿ ಶೇಕಡಾ 49 ರಷ್ಟು ಜನ ಕನಿಷ್ಠ ಒಂಟಿತನ, 30 ಪ್ರತಿಶತ ಕೆಲವೊಮ್ಮೆ ಮತ್ತು 21 ಶೇಕಡಾ ಹೆಚ್ಚಾಗಿ ಒಂಟಿಯಾಗಿರುತ್ತಾರೆ.
ಅಲೋನ್‌ನ ಸಹಾಯವಾಣಿಯ ಮಾಹಿತಿಯು ಸಾಂಕ್ರಾಮಿಕ ರೋಗವು ವಯಸ್ಸಾದ ವಯಸ್ಕರಿಗೆ ಹಾನಿಯನ್ನುಂಟುಮಾಡಿದೆ ಎಂದು ಸೂಚಿಸಿದೆ. ಅಲೋನ್‌ನ ದೂರವಾಣಿ ಸ್ನೇಹಪರ ಸೇವಾ ಸ್ವಯಂಸೇವಕರು ವಯಸ್ಸಾದವರಿಗೆ ಕರೆ ಮಾಡಿ ಆರೋಗ್ಯ ಮತ್ತು ಯೋಗಕ್ಷೇಮಗಳನ್ನು ವಿಚಾರಿಸಿದರು ಮತ್ತು ಸಾಮಾಜಿಕ ಸಂವಹನದ ಸೀಮಿತ ವಿಧಾನಗಳನ್ನು ಹೊಂದಿರುವವರಿಗೆ ಸುಮಾರು 500 ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಿದರು.
ಮಾರ್ಚ್ 9 ಮತ್ತು ಜುಲೈ 5, 2020 ರ ಅವಧಿಯಲ್ಲಿ 26,174 ಕರೆಗಳು ಬಂದಿವೆ ಎಂದು ಅಲೋನ್‌ನ ಸಂಶೋಧನೆಗಳು ತೋರಿಸಿದ್ದು, ಒಟ್ಟು ಕರೆಗಳಲ್ಲಿ 55 ಪ್ರತಿಶತ 70 ರ ಮೇಲ್ಪಟ್ಟವರಾಗಿದ್ದು, ಕರೆ ಮಾಡಿದವರಲ್ಲಿ ಶೇಕಡಾ 75 ರಷ್ಟು ಜನರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ