ದೇಶದಲ್ಲಿ ಹೆಚ್ಚಿದ ಕೊರೊನಾ ಪ್ರಕರಣಗಳ ಸಂಖ್ಯೆ: 3,47,254 Saaksha Tv
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಕಳೆದ 24 ಗಂಟೆಯಲ್ಲಿ 3,47,254 ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಪ್ರತಿದನದ ಸೋಂಕಿನ ಏರಿಕೆ ಪ್ರಮಾಣವು ಶೇ17.94 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇನ್ನೂ ಸಕ್ರೀಯ ಪ್ರಕರಣಗಳ ಸಂಖ್ಯೆ 20,18,285 ಇದ್ದು ಸಕ್ರೀಯ ಸೋಂಕಿನ ಪ್ರಮಾಣವು 5.23ರಷ್ಟಿದೆ. ಅಲ್ಲದೇ ಕಳೆದ 24 ಗಂಟೆಯಲ್ಲಿ 2,51,777 ಜನ ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣವು ಶೇ 93.50 ರಷ್ಟಿದೆ. ನಿನ್ನೆಗಿಂತ ಇವತ್ತು ಓಮಿಕ್ರಾನ ಪ್ರಕರಣಗಳು ಏರಿಕೆಯಾಗಿದ್ದು 9,692 ಪ್ರಕರಣಗಳು ದಾಖಲಾಗಿವೆ. ಶೇ 4.36 ರಷ್ಟು ಏರಿಕೆಯಾಗಿದೆ.
ಹಾಗೇ ಕಳೆದ 24 ಗಂಟೆಯಲ್ಲಿ 703 ಜನ ಸಾವನ್ನಪ್ಪಿದ್ದು, 19,35,912 ಜನರಿಗೆಎ ಪರೀಕ್ಷಿಸಲಾಗಿದೆ. ಮತ್ತು 160.43 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ಟ್ವಿಟ್ ಮಾಡಿದೆ.