ನವದೆಹಲಿ : ರಾಜಕೀಯ ನಾಯಕತ್ವ ಬದಲಾಯಿಸುವಂತೆ ಒತ್ತಾಯಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಂಸದರು ಸೇರಿದಂತೆ 100ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ಝಾ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಪತ್ರದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಪಾರದರ್ಶಕ ಚುನಾವಣೆಗಳನ್ನು ಕೋರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ಪಕ್ಷದೊಳಗಿನ ವ್ಯವಹಾರಗಳಿಂದಾಗಿ ತೊಂದರೆಗೀಡಾದ ಸುಮಾರು 100 ಕಾಂಗ್ರೆಸ್ ನಾಯಕರು, ರಾಜಕೀಯ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ. ರಾಜಕೀಯ ನಾಯಕತ್ವದಲ್ಲಿ ಬದಲಾವಣೆ ಮತ್ತು ಸಿಡಬ್ಲ್ಯೂಸಿಯಲ್ಲಿ ಪಾರದರ್ಶಕ ಚುನಾವಣೆಗಳನ್ನು ನಡೆಸುವಂತೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ನಾಯಕರು ಪತ್ರ ಬರೆದಿದ್ದಾರೆ.
ಸಂಜಯ್ ಝಾ ಅವರು ನಾಯಕರ ಹೆಸರು ಮತ್ತು ಪತ್ರದ ನಿಖರವಾದ ವಿಷಯದ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಅವರು ತಮ್ಮ ಟ್ವೀಟ್‌ನಲ್ಲಿ “ಈ ಜಾಗವನ್ನು ವೀಕ್ಷಿಸಿ” ಎಂದು ಬರೆದಿದ್ದಾರೆ.









