ರಷ್ಯಾ, ಉಕ್ರೇನ್ ಮಧ್ಯೆ ಹೆಚ್ಚಿದ ಯುದ್ಧದ ಉದ್ವಿಗ್ನತೆ Saaksha Tv
ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬೈಡೆನ್ ಗುರುವಾರ ಅಮೆರಿಕದ ನಾಗರಿಕರನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಒತ್ತಾಯಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಕೂಡ ಉಕ್ರೇನ್ ನಲ್ಲಿರುವ ಭಾರತೀಯನ್ನು ಭಾರತಕ್ಕೆ ಮರಳಿ ಕರೆಸಿಕೊಳ್ಳುತ್ತಿದೆ. ಈ ನಡುವೆ ಅಧ್ಯಕ್ಷ ಜೋ ಬೈಡೆನ್ ಕೂಡ ಗುರುವಾರ ಅಮೆರಿಕದ ನಾಗರಿಕರನ್ನು ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಿದ್ದಾರೆ.
ರಷ್ಯಾ ಉಕ್ರೇನ್ ಗಡಿಯಲ್ಲಿ ತನ್ನ ಪಡೆಗಳನ್ನು ನಿಯೋಜನೆ ಮುಂದುವರೆಸಿದೆ ಮತ್ತು ಈಗ 1,00,000 ಲಕ್ಷ ಸೈನಿಕರನ್ನು ಗಡಿಯಲ್ಲಿ ನಿಯೋಜಿಸಿರುವ ಎಂಬ ಮಾಹಿತಿ ಇದ್ದು, ಈಗ ಅಮೆರಿಕ ಕೂಡಾ 1,700 ಸೈನಿಕರನ್ನು ಒಳಗೊಂಡ ಯುಎಸ್ ಪಡೆಗಳು ಉಕ್ರೇನ್ ಗಡಿ ಸಮೀಪವಿರುವ ಆಗ್ನೇಯ ಪೋಲೆಂಡ್ಗೆ ಬಂದಿಳಿದಿವೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಭೀತಿ ಹೆಚ್ಚಾಗಿದ್ದರಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗಡಿಯಲ್ಲಿ ಸೈನಿಕರನ್ನು ನಿಯೋಜಿಸಲು ಆದೇಶ ಹೊರಡಿಸಿದ್ದಾರೆ. ಉಕ್ರೇನ್ ಸುತ್ತಲೂ ರಷ್ಯಾ ಅಪಾರ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ನಿಯೋಜಿಸಿದೆ. ಅವರ ಚಲನವಲನವು ಅಸಹಜ ರೀತಿಯಲ್ಲಿದೆ ಎಂದು ಅಮೆರಿಕ ಮತ್ತು ನ್ಯಾಟೋ ತಿಳಿಸಿವೆ.
ಉಕ್ರೇನ್ ಅಥವಾ ನ್ಯಾಟೋ ದೇಶಗಳ ಗಡಿಯಲ್ಲಿ ರಷ್ಯಾ ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿದರೆ, ಉಕ್ರೇನ್ನಲ್ಲಿ ಸಂಘರ್ಷದ ಅಪಾಯ ಮತ್ತಷ್ಟು ಭುಗಿಲೇಳುವುದು ಖಚಿತ. ಇದು ಮುಂದೆ ಭೀಕರ ಯುದ್ಧಕ್ಕೆ ಎಡೆ ಮಾಡಿಕೊಡಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.