IND v AUS Series : ಪಾಂಟಿಂಗ್ ದಾಖಲೆ ಮೇಲೆ ಕಣ್ಣಿಟ್ಟ ಸ್ಟೀವ್ ಸ್ಮಿತ್….
ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಸ್ಟೀವ್ ಸ್ಮಿತ್ ಈಗಾಗಲೇ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಇದರ ನಡುವೆ ತಮ್ಮದೇ ತಂಡದ ಮಾಜಿ ಆಟಗಾರ ರಿಕಿ ಪಾಂಟಿಂಗ್ ರೆಕಾರ್ಡ್ ಬ್ರೇಕ್ ಮಾಡುವತ್ತ ಸ್ಟೀವ್ ಸ್ಮಿತ್ ಕಣ್ಣಿಟ್ಟಿದ್ದಾರೆ. ಪ್ರತಿಬಾರಿಯೂ ಭಾರತದ ವಿರುದ್ಧ ಆಡಲು ಉತ್ಸಾಹ ತೋರುವ ಸ್ಮಿತ್, ಟೀಂ ಇಂಡಿಯಾ ವಿರುದ್ಧದ 14 ಟೆಸ್ಟ್ ಪಂದ್ಯಗಳಲ್ಲಿ 1742 ರನ್‌ಗಳಿಸಿದ್ದಾರೆ.
ಈ ನಡುವೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ 9 ಸಾವಿರ ರನ್ ಪೂರೈಸಿದ 4ನೇ ಆಟಗಾರನಾಲು ಕಾಯುತ್ತಿದ್ದು, ಆಸೀಸ್ ಪರ ಈವರೆಗೂ ರಿಕಿ ಪಾಂಟಿಂಗ್(13,378), ಅಲೆನ್ ಬಾರ್ಡರ್(11174) ಹಾಗೂ ಸ್ಟೀವ್ ವಾ(10927) ಈ ಸಾಧನೆ ಮಾಡಿದ್ದಾರೆ. ಅಲ್ಲದೇ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ಗಳಿಸಿದ 3ನೇ ಆಟಗಾರನಾಗುವ ನಿರೀಕ್ಷೆ ಹೊಂದಿದ್ದಾರೆ.
ಇನ್ನೂ ಕಾಂಗರೂ ಪಡೆಯ ಮಾಜಿ ಆಟಗಾರ ರಿಕಿ ಪಾಂಟಿಂಗ್, ಈವರೆಗೆ ಭಾರತದ ವಿರುದ್ಧ 8 ಶತಕ ಬಾರಿಸಿದ ದಾಖಲೆ ಹೊಂದಿದ್ದು, ಸ್ಟೀವ್ ಸ್ಮಿತ್ ಸಹ 8 ಶತಕ ದಾಖಲಿಸಿದ್ದಾರೆ. ಹೀಗಾಗಿ ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮತ್ತೊಂದು ಸೆಂಚುರಿ ಬಾರಿಸಿ ಪಾಂಟಿಂಗ್ ದಾಖಲೆ ಹಿಂದಿಕ್ಕಲು ಸ್ಮಿತ್ ಸಜ್ಜಾಗಿದ್ದಾರೆ.
IND v AUS Series: Steve Smith eyeing Ponting record….








