Ind-vs-Aus-2nd-t20 | ರೋಹಿತ್ ನಾಯಕನ ಆಟ – ಟೀಂ ಇಂಡಿಯಾಗೆ ಗೆಲುವು
ನಾಗ್ಪುರ : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ ಗಳ ಅಂತರದ ಜಯ ಸಾಧಿಸಿದೆ.
ಈ ಮೂಲಕ ಟೀಂ ಇಂಡಿಯಾ ಸರಣಿಯನ್ನು 1-1 ಸಮಬಲಗೊಳಿಸಿದೆ.
ಮಳೆಯಿಂದಾಗಿ ಪಂದ್ಯವನ್ನು 8 ಓವರ್ ಗಳಿಗೆ ಸೀಮಿತವಾಗಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೆಲಿಯಾ ತಂಡ 91 ರನ್ ಗಳನ್ನು ಗಳಿಸಿತ್ತು.
ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 7.2 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 92 ರನ್ ಗಳಿಸಿ ಜಯ ಸಾಧಿಸಿತು.
ಭಾರತದ ಪರ ಗೆಲ್ಲಲೇಬೇಕಾದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅಜೇಯ 46 ರನ್ ಗಳಿಸಿ ಅಬ್ಬರಿಸಿದರು.
ಹಿಟ್ ಮ್ಯಾನ್ 20 ಎಸೆತಗಳಲ್ಲಿ ನಾಲ್ಕು ಬೌಂಡರಿ, ನಾಲ್ಕು ಸಿಕ್ಸರ್ ಗಳೊಂದಿಗೆ 46 ರನ್ ಗಳಿಸಿದರು.
ದಿನೇಶ್ ಕಾರ್ತಿಕ್ 10 ರನ್ ಗಳಿಸಿದರು. ವಿರಾಟ್ ಕೊಹ್ಲಿ 11 ರನ್, ಹಾರ್ದಿಕ್ ಪಾಂಡ್ಯ 9 ರನ್ ಗಳಿಸಿದ್ದಾರೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡದ ಪರ ಕ್ಯಾಮರೂನ್ ಗ್ರೀನ್ 5 ರನ್, ಪಿಂಚ್ 31 ರನ್, ಮ್ಯಾಥ್ಯೂ ವೇಡ್ 20 ಎಸೆತಗಳಲ್ಲಿ 43 ರನ್ ಗಳಿಸಿದರು.
ಭಾರತದ ಪರ ಅಕ್ಷರ್ ಪಟೇಲ್ ಎರಡು ವಿಕೆಟ್, ಬುಮ್ರಾ 1 ವಿಕೆಟ್ ಪಡೆದರು.