IND vs AUS ಭಾರತದಲ್ಲಿ ಹೆಚ್ಚು ಸರಾಸರಿ ಹೊಂದಿದ ವಿದೇಶಿ ಬ್ಯಾಟರ್ ಯಾರು ಗೊತ್ತಾ..??
ಟೆಸ್ ಆವೃತ್ತಿಯಲ್ಲಿ ಭಾರತ ನೆಲದಲ್ಲಿ 2013ರಿಂದ ಅತಿ ಹೆಚ್ಚು ಸರಾಸರಿ ಹೊಂದಿದ ವಿದೇಶಿ ಬ್ಯಾಟರ್ ಯಾರು ?
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾರತ ನೆಲದಲ್ಲಿ (ಟೆಸ್ಟ್ ಆವೃತ್ತಿ) 14 ಇನ್ನಿಂಗ್ಸ್ ಗಳಿಂದ 3 ಶತಕ ಸಿಡಿಸಿ ಒಟ್ಟು 722 ರನ್ ಕಲೆ ಹಾಕಿದ್ದಾರೆ. 60.17 ಬ್ಯಾಟಿಂಗ್ ಸರಾಸರಿ ಮೊದಲ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಭಾರತ ನೆಲದಲ್ಲಿ (ಟೆಸ್ಟ್ ಆವೃತ್ತಿ) 18 ಇನ್ನಿಂಗ್ಸ್ ಗಳಿಂದ 2 ಶತಕ ಸಿಡಿಸಿ 859 ರನ್ ಗಳಿಸಿದ್ದಾರೆ.47.72 ಸರಾಸರಿ ಹೊಂದಿದ್ದಾರೆ.
ಇಂಗ್ಲೆಂಡ್ನ ಆಲ್ರೌಂಡರ್ ಮೊಯಿನ್ ಅಲಿ ಭಾರತ ನೆಲದಲ್ಲಿ (ಟೆಸ್ಟ್ ಆವೃತ್ತಿ) 11 ಇನ್ನಿಂಗ್ಸ್ ಗಳಿಂದ 2 ಶತಕ ಸಿಡಿಸಿ 430 ರನ್ ಹೊಡೆದು 39.09 ಸರಾಸರಿ ಹೊಂದಿದ್ದಾರೆ.
ಇಂಗ್ಲೆಂಡ್ ನ ಮತ್ತೋರ್ವ ಆಲ್ರೌಂಡರ್ ಬೆನ್ ಸ್ಟೋಕ್ಸ್ ಭಾರತ ನೆಲದಲ್ಲಿ 18 ಇನ್ನಿಂಗ್ಸ್ ಗಳಿಂದ 1 ಶತಕ 548 ರನ್ ಹೊಡೆದಿದ್ದು 32.24 ಸರಾಸರಿ ಹೊಂದಿದ್ದಾರೆ.
IND vs AUS , most rated foreign batter in india








