IND vs Aus : ಜಡೇಜಾ ಅವರ ಅತ್ಯದ್ಭುತ ಸ್ಪಿನ್ ದಾಳಿಗೆ ಆಸಿಸ್ ತತ್ತರ
ರವೀಂದ್ರ ಜಡೇಜಾ ಅವರ ಅತ್ಯದ್ಭುತ ಸ್ಪಿನ್ ದಾಳಿಯ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಸರಣಿಯಲ್ಲಿ ರೋಹಿತ್ ಪಡೆ 2-0 ಮುನ್ನಡೆ ಪಡೆದಿದೆ.
ಹೊಸದಿಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೂರನೆ ದಿನದಾಟದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡನೆ ಇನ್ನಿಂಗ್ಸ್ನಲ್ಲಿ 113 ರನ್ಗಳಿಗೆ ಸರ್ವಪತನ ಕಂಡಿತು. ಭಾರತ ಎರಡನೆ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 118 ರನ್ ಕಲೆ ಹಾಕಿತು.
ದಿನದಾಟದ ಆರಂಭದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಆಸ್ಟ್ರೇಲಿಯಾ ಬ್ಯಾಟರ್ಗಳು ಆಘಾತಕಾರಿ ರೀತಿಯಲ್ಲಿ ಬ್ಯಾಟಿಂಗ್ ಸುಲಭವಾಗಿ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜಾ 2 ಇನ್ನಿಂಗ್ಸ್ಗಳಿಂದ 10 ವಿಕೆಟ್ ಪಡೆದರು.ಆರ್. ಅಶ್ವಿನ್ 59 ರನ್ ನೀಡಿ 3 ವಿಕೆಟ್ ಪಡೆದರು. 52 ರನ್ಗಳ ಅಂತರದಲ್ಲಿ 9 ವಿಕೆಟ್ ಉರುಳಿದವು. ಸ್ಟೀವ್ ಸ್ಮಿತ್, ಮ್ಯಾಟ್ ರೆನ್ಶಾ, ಆ್ಯಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ , ಮ್ಯಾಥ್ಯೂ ಕ್ಯೂನೆಮನ್ ಸ್ವೀಪ್ ಶಾಟ್ ಹೊಡೆಯಲು ಹೋಗಿ ಪೆವಿಲಿಯನ್ ಸೇರಿದರು. ಮೊದಲ ದಿನ ಆಸಿಸ್ 61ಕ್ಕೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಮೂರನೆ ದಿನ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ಸೋಲಿನ ಸುಳಿಯಲ್ಲಿ ಸಿಲುಕಿತು. ಭಾರತ ಪರ ರೋಹಿತ್ ಶರ್ಮಾ 31, ಕೆ.ಎಲ್,ರಾಹುಲ್ 1, ಚೇತೇಶ್ವರ ಪೂಜಾರ 31, ಶ್ರೀಕರ್ ಭರತ್ ಅಜೇಯ 23 ರನ್ ಗಳಿಸಿದರು.
ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಜನರಾದರು.








