T20 ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದ ಹಿಟ್ ಮ್ಯಾನ್ ಶರ್ಮಾ…
ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ಭಾರತ ನಡುವಿನ ಪಂದ್ಯದಲ್ಲಿ ಪ್ರೇಕ್ಷರು ಎರಡು ರೀತಿಯ ಮಳೆಗೆ ಸಾಕ್ಷಿಯಾದರು. ಒಂದು ವರುಣನ ಆರ್ಭಟವಾದರೇ ಇನ್ನೊಂದು ರೋಹಿತ್ ಶರ್ಮಾ ಫೋರು ಸಿಕ್ಸರ್ ಗಳ ಸುರಿಮಳೆ.
ಮಳೆಯಿಂದ ಒದ್ದೆಯಾದ ಕಾರಣದಿಂದ ಎರಡನೇ ಟಿ 20 ಪಂದ್ಯವನ್ನ 8 ಓವರ್ ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ ಮಾಡಿದ ಆಸ್ಟ್ರೇಲಿಯಾ ನಿಗದಿತ 8 ಓವರ್ ಓವರ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 90 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.
91 ರನ್ ಗಳ ಟಾರ್ಗೇಟ್ ಪಡೆದ ಭಾರತ ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಮಡಿತು. ನಾಯಕನ ಆಟವಾಡಿದ ರೋಹಿತ್ ಶರ್ಮಾ ಕೊನೆಯವರೆಗೂ ನಿಂತು ತಂಡವನ್ನ ಗೆಲುವಿನ ದಡ ಸೇರಿಸಿದರು. ಇದರ ಜೊತೆಗೆ ಟಿ 20 ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಕೇವಲ 20 ಎಸೆತಗಳಲ್ಲಿ 4 ಫೋರ್, 4 ಸಿಕ್ಸರ್ ಚಚ್ಚಿದ ಹಿಟ್ ಮ್ಯಾನ್ ಅಜೇಯ 46 ರನ್ ಗಳಿಸಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನ ಛಿದ್ರಮಾಡಿದ್ದಾರೆ
ಟಿ20 ಅಂತರರಾಷ್ಟ್ರೀಯ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆ ಪಟ್ಟಿಯಲ್ಲಿ ರೋಹಿತ್ ಹಾಗೂ ಗಪ್ಟಿಲ್ ಇಲ್ಲಿಯವರೆಗೆ ಜಂಟಿ ಸ್ಥಾನ ಹಂಚಿಕೊಂಡಿದ್ದರು. ಇದೀಗ ರೋಹಿತ್ 176 ಸಿಕ್ಸರ್ಗಳನ್ನು ಬಾರಿಸಿ ಗಪ್ಟಿಲ ದಾಖಲೆ ಸರಿಗಟ್ಟಿದ್ದಾರೆ.
ಸದ್ಯ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಪಟ್ಟಿಯಲ್ಲಿ ರೋಹಿತ್ ಅಗ್ರಸ್ಥಾನದಲ್ಲಿದ್ದಾರೆ. 172 ಸಿಕ್ಸರ್ನೊಂದಿಗೆ ಮಾರ್ಟಿನ್ ಗಪ್ಟಿಲ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಕ್ರಿಸ್ ಗೇಲ್ 79 ಪಂದ್ಯಗಳಲ್ಲಿ 124 ಸಿಕ್ಸರ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.








