Ind Vs Ban Test : ಬಾಂಗ್ಲಾದೇಶದ ವಿರುದ್ಧ ಈವರೆಗೂ ಸೋಲನ್ನೇ ಕಂಡಿಲ್ಲ ಟೀಂ ಇಂಡಿಯಾ
ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿರುವ ಟೀಂ ಇಂಡಿಯಾ, ತನ್ನ ಗೆಲುವಿನ ಓಟವನ್ನ ಮುಂದುವರಿಸುವ ತವಕದಲ್ಲಿದೆ. ಆ ಮೂಲಕ ODI ಕ್ರಿಕೆಟ್‌ನಲ್ಲಿ ಸರಣಿ ಸೋಲಿನ ಆಘಾತ ಅನುಭವಿಸಿದ್ದ ಭಾರತ ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದೆ.
ಬಾಂಗ್ಲಾದೇಶದ ವಿರುದ್ಧ ಈವರೆಗೂ 11 ಟೆಸ್ಟ್ ಪಂದ್ಯಗಳನ್ನ ಆಡಿರುವ ಭಾರತ ಈವರೆಗೂ ಸೋಲನ್ನೇ ಕಂಡಿಲ್ಲ. 11 ಪಂದ್ಯಗಳಲ್ಲಿ 9 ಗೆಲುವು ಕಂಡಿರುವ ಟೀಂ ಇಂಡಿಯಾ, 2 ಪಂದ್ಯವನ್ನ ಡ್ರಾ ಮಾಡಿಕೊಂಡಿದೆ.
ಇನ್ನೂ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಬಾಂಗ್ಲಾ ನೆಲದಲ್ಲೂ ಸಹ ಭಾರತ ಅದ್ಭುತ ದಾಖಲೆ ಹೊಂದಿದೆ. ಬಾಂಗ್ಲಾದೇಶದಲ್ಲಿ 8 ಟೆಸ್ ಪಂದ್ಯಗಳನ್ನ ಆಡಿರುವ ಭಾರತ 6ರಲ್ಲಿ ಗೆಲುವಿನ ನಗೆಬೀರಿದೆ. ಈ ಎರಡು ತಂಡಗಳು 2019ರಲ್ಲಿ ಕೊಲ್ಕತ್ತಾದಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನ ಸಹ ಆಡಿವೆ.
ಇನ್ನೂ ಉಭಯ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿರುವ ದಾಖಲೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹೊಂದಿದ್ದಾರೆ. ಬಾಂಗ್ಲಾ ವಿರುದ್ಧ 7 ಟೆಸ್ಟ್ ಪಂದ್ಯವನ್ನಾಡಿರುವ ತೆಂಡುಲ್ಕರ್ 136.66ರ ಸರಾಸರಿಯಲ್ಲಿ 820 ರನ್‌ಗಳಸಿದ್ದಾರೆ. 2004ರಲ್ಲಿ ಸಚಿನ್ ತೆಂಡುಲ್ಕರ್ ಢಾಕಾದಲ್ಲಿ ನಡೆದ ಟೆಸ್ಟ್‌ನಲ್ಲಿ ಬಾಂಗ್ಲಾ ವಿರುದ್ಧ 248 ರನ್‌ಗಳಿಸಿದ್ದರು. ಇನ್ನೂ ಎರಡು ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೆಚ್ಚು ವಿಕೆಟ್ ಪಡೆದಿದ್ದಾರೆ.








