ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

IND vs BNG : ಇಶಾನ್ ಕಿಶನ್ ದ್ವಿಶತಕದ ಅಬ್ಬರ , ಭಾರತಕ್ಕೆ 227 ರನ್ಗಳ ಭರ್ಜರಿ ಗೆಲವು

ಭಾರತ ಪರ ಆರಂಭಿಕ ಬ್ಯಾಟರ್ ಶಿಖರ್ ಧವನ್ 3 ರನ್ಗಳಿಸಿ ಎಲ್ಬಿ ಬಲಗೆ ಬಿದ್ದು ಹಸನ್ ಮೀರಾಜ್ಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ ಜೊತೆಗೂಡಿದ ವಿರಾಟ್ ಕೊಹ್ಲಿ ಬಾಂಗ್ಲಾ ಬೌಳರ್ಗಳ ಬೆಂಡೆತ್ತಿ ಭರ್ಜರಿ ಬ್ಯಾಟಿಂಗ್ ಮಾಡಿದರು.

Namratha Rao by Namratha Rao
December 11, 2022
in ಕ್ರಿಕೆಟ್, News, Newsbeat, Sports
Ishan Kishan
Share on FacebookShare on TwitterShare on WhatsappShare on Telegram

IND vs BNG : ಇಶಾನ್ ಕಿಶನ್ ದ್ವಿಶತಕದ ಅಬ್ಬರ , ಭಾರತಕ್ಕೆ 227 ರನ್ಗಳ ಭರ್ಜರಿ ಗೆಲವು

ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರ ದಾಖಲೆಯ ದ್ವಿಶತಕ ಹಾಗೂ ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ ಆತಿಥೇಯ ಬಾಂಗ್ಲಾದೇಶ ವಿರುದ್ಧ 227 ರನ್ಗಳ ಭರ್ಜರಿ ಗೆಲವು ದಾಖಲಿಸಿದೆ. ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಅಂತಿಮ ಕದನದಲ್ಲಿ ಕ್ಲೀನ್ ಸ್ವೀಪ್ ನಿಂದ ಭಾರತ ಪಾರಾಯಿತು.
ಚಿತ್ತಗಾಂಗ್ ನ ಜಾಹುರ್ ಮೈದಾನದಲ್ಲಿ ನಡೆದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಕಲೆ ಹಾಕಿತು. ಬಾಂಗ್ಲಾದೇಶ 34 ಓವರ್ಗಳಲ್ಲಿ 182 ರನ್ಗಳಿಗೆ ಆಲೌಟ್ ಆಯಿತು.

Related posts

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

March 19, 2026
ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

March 19, 2026

ಭಾರತ ಪರ ಆರಂಭಿಕ ಬ್ಯಾಟರ್ ಶಿಖರ್ ಧವನ್ 3 ರನ್ಗಳಿಸಿ ಎಲ್ಬಿ ಬಲಗೆ ಬಿದ್ದು ಹಸನ್ ಮೀರಾಜ್ಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ ಜೊತೆಗೂಡಿದ ವಿರಾಟ್ ಕೊಹ್ಲಿ ಬಾಂಗ್ಲಾ ಬೌಳರ್ಗಳ ಬೆಂಡೆತ್ತಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಇಶಾನ್ ಕಿಶನ 49 ಎಸೆತದಲ್ಲಿ ಅರ್ಧ ಶತಕ, ವಿರಾಟ್ ಕೊಹ್ಲಿ 54 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು.ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದ ಇಶಾನ್ ಕಿಶನ್ 85 ಎಸೆತದಲ್ಲಿ ಶತಕ ಪೂರೈಸಿ ಮಿಂಚಿದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ ಸಾಧನೆ ಮಾಡಿದರು.

ನಂತರವೂ ಸ್ಟ್ರೈಕ್ ಪಡೆದು ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ಇಶಾನ್ ಕಿಶನ್ 103 ಎಸೆತದಲ್ಲಿ 150 ರನ್ ಪೂರೈಸಿದರು. ನಂತರ 126ನೇ ಎಸೆತದಲ್ಲಿ ವೇಗದ ದ್ವಿಶತಕ ಸಿಡಿಸಿದರು.36ನೇ ಓವರ್ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ ತಸ್ಕಿನ್ ಅಹ್ಮದ್ ಎಸೆತದಲ್ಲಿ ಲಿಟ್ಟನ್ ದಾಸ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇಶಾನ್ ಕಿಶನ್ ಒಟ್ಟು 131 ಎಸೆತದಲ್ಲಿ 24 ಬೌಂಡರಿ, 10 ಸಿಕ್ಸರ್ ಸಿಡಿಸಿದರು.

ವಿರಾಟ್ ಕೊಹ್ಲಿ 85 ಎಸೆತದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. 113 ರನ್ಗಳಾಗಿದ್ದಾಗ ವಿರಾಟ್ ಸ್ಪಿನ್ನರ್ ಶಕೀಬ್ ಅಲ್ ಹಸನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಶ್ರೇಯಸ್ ಅಯ್ಯರ್ 3, ಕೆ.ಎಲ್.ರಾಹುಲ್ 8, ವಾಷಿಂಗ್ಟನ್ ಸುಂದರ್ 37, ಅಕ್ಸರ್ ಪಟೇಲ್ 20, ಶಾರ್ದೂಲ್ 3, ಕುಲದೀಪ್ ಯಾದವ್ 3 ರನ್ ಹೊಡೆದರು.
ಬಾಂಗ್ಲಾ ಪರ ತಸ್ಕಿನ್ ಅಹಮದ್ 89ಕ್ಕೆ 2, ಎಬೊಡೊತ್ ಹೊಸೇನ್ 80ಕ್ಕೆ 2, ಶಕೀಬ್ ಅಲ್ ಹಸನ್ 68ಕ್ಕೆ 2 ವಿಕೆಟ್, ಮುಸ್ತಾಫಿಜುರ್ ರೆಹಮಾನ್, ಮೆಹದಿ ಹಸನ್ ತಲಾ 1 ವಿಕೆಟ್ ಪಡೆದರು. ಭಾರತ ಏಕದಿನ ಕ್ರಿಕೆಟ್ನಲ್ಲಿ ನಾಲ್ಕನೆ ಗರಿಷ್ಠ ಮೊತ್ತ ದಾಖಲಿಸಿದ ಸಾಧನೆ ಮಾಡಿತು.

410 ರನ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಭಾರತದ ವೇಗಿಗಳ ದಾಳಿಗೆ ತತರಿಸಿ ಹೋಯಿತು. ಅನಮುಲ್ ಹಕ್ 8,ನಾಯಕ ಲಿಟನ್ ದಾಸ್ 29, ಶಕೀಬ್ ಅಲ್ ಹಸನ್ 43 , ಯಸೀರ್ ಅಲಿ, 25, ಮೊಹ್ಮದ್ಹುಲ್ಲಾ 20 ರನ್, ಉಳಿದ ಬ್ಯಾಟರ್ಗಳು ಒಂದಂಕಿ ರನ್ ಹೊಡೆದರು. ಭಾರತದ ಪರ ಶಾರ್ದೂಲ್ ಠಾಕೂರ್ 30ಕ್ಕೆ 3 ವಿಕೆಟ್, ಅಕ್ಸರ್ ಪಟೇಲ್, ಉಮ್ರಾನ್ ಮಲ್ಲಿಕ್ ತಲಾ 2 ವಿಕೆಟ್, ಮೊಹ್ಮದ್ ಸೀರಾಜ್, ಕುಲದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು. ಬಾಂಗ್ಲಾದ ಮೆಹದಿ ಹಸನ್ ಮೀರಜ್ ಸರಣಿ ಶ್ರೇಷ್ಠ ಗೌರವ ಪಡೆದರು.

Tags: #Ishan Kishan#saakshatvIND vs BNGteam india
ShareTweetSendShare
Join us on:

Related Posts

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

by Shwetha
March 19, 2026
0

ಬೆಂಗಳೂರು: ರಾಜ್ಯದಲ್ಲಿ ಬದುಕಿರುವವರಿಗಷ್ಟೇ ಅಲ್ಲ, ಮೃತಪಟ್ಟವರಿಗೂ ಮಣ್ಣಾಗಲು ಜಾಗವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡಿ, ಇದೀಗ ಸ್ಮಶಾನಕ್ಕೆ ಜಾಗವಿಲ್ಲದೆ...

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

by Shwetha
March 19, 2026
0

ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಸಿಗುವ ಸಾಧ್ಯತೆ ಹೆಚ್ಚಿದೆ. ಕುಟುಂಬಸ್ಥರಿಂದ ವಿರೋಧ, ಬಹಿಷ್ಕಾರ ಮತ್ತು ಕೆಲ ಸಂದರ್ಭಗಳಲ್ಲಿ ಹಿಂಸೆ ಅಥವಾ ಕೊಲೆಗಳ ಘಟನೆಗಳ...

ನಟಿ ತಮನ್ನಾಗೆ 5 ಕೋಟಿ ನೀಡಲು ದುಡ್ಡಿದೆ ವಿಧವೆಯರಿಗೆ ವೇತನ ನೀಡಲು ಆಗಲ್ವಾ ಸರ್ಕಾರದ ವಿರುದ್ಧ ಶರಣು ಸಲಗಾರ್ ಆಕ್ರೋಶ

ನಟಿ ತಮನ್ನಾಗೆ 5 ಕೋಟಿ ನೀಡಲು ದುಡ್ಡಿದೆ ವಿಧವೆಯರಿಗೆ ವೇತನ ನೀಡಲು ಆಗಲ್ವಾ ಸರ್ಕಾರದ ವಿರುದ್ಧ ಶರಣು ಸಲಗಾರ್ ಆಕ್ರೋಶ

by Shwetha
March 19, 2026
0

ಬೆಳಗಾವಿ: ರಾಜ್ಯ ಸರ್ಕಾರದ ಆದ್ಯತೆಗಳು ಮತ್ತು ಅನುದಾನ ಹಂಚಿಕೆಯ ತಾರತಮ್ಯದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದ್ದು, ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗಾರ್ ಅವರು ಸರ್ಕಾರದ...

ಲೈಕ್ಸ್ ಆಸೆಗೆ ಅಪ್ಪನ ಪ್ರಾಣದ ಜತೆ ಆಟ ಪ್ರ್ಯಾಂಕ್ ಹೆಸರಲ್ಲಿ ವಿಕೃತಿ :ಬೆಂಗಳೂರಿನ ಕೊರಿಯರ್ ಆಫೀಸ್ ನಲ್ಲಿ ರೀಲ್ಸ್ ಹುಚ್ಚರ ಹೈಡ್ರಾಮಾ

ಲೈಕ್ಸ್ ಆಸೆಗೆ ಅಪ್ಪನ ಪ್ರಾಣದ ಜತೆ ಆಟ ಪ್ರ್ಯಾಂಕ್ ಹೆಸರಲ್ಲಿ ವಿಕೃತಿ :ಬೆಂಗಳೂರಿನ ಕೊರಿಯರ್ ಆಫೀಸ್ ನಲ್ಲಿ ರೀಲ್ಸ್ ಹುಚ್ಚರ ಹೈಡ್ರಾಮಾ

by Shwetha
March 19, 2026
0

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಕಾಮೆಂಟ್ಸ್ ಗಿಟ್ಟಿಸಿಕೊಳ್ಳಲು ಇಂದಿನ ಯುವಪೀಳಿಗೆ ಯಾವ ಹಂತಕ್ಕೆ ಬೇಕಾದರೂ ಇಳಿಯಲು ಸಿದ್ಧರಿದ್ದಾರೆ ಎಂಬುದಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಂತಿದೆ....

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

by Shwetha
March 19, 2026
0

ರಾಜ್ಯ ಸರ್ಕಾರ 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಪಾದರಕ್ಷೆಗಳನ್ನು ಒದಗಿಸಲು ₹104 ಕೋಟಿ ಬಿಡುಗಡೆ ಮಾಡಿದೆ. ಈ ಕುರಿತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram