ಎರಡನೇ ಟಿ 20 ಗೂ ಮುನ್ನ ಟೀಂ ಇಂಡಿಯಾಗೆ ಶಾಕ್
ಐರ್ಲೆಂಡ್ ವಿರುದ್ಧದ ಎರಡನೇ ಟಿ20ಗೂ ಮುನ್ನ ಟೀಂ ಇಂಡಿಯಾಗೆ ಭಾರೀ ಆಘಾತ ಎದುರಾಗುವ ಸಾಧ್ಯತೆ ಇದೆ.
ಫಾರ್ಮ್ನಲ್ಲಿರುವ ಭಾರತದ ಯುವ ಆರಂಭಿಕ ಬ್ಯಾಟ್ಸ್ಮನ್ ರುತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದ ಎರಡನೇ ಟಿ20ಗೆ ಹೊರಗುಳಿಯುವ ಸಾಧ್ಯತೆಯಿದೆ.
ಭಾನುವಾರ ಡಬ್ಲಿನ್ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ರುತುರಾಜ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು.
ಇದರಿಂದಾಗಿ ಟೀಂ ಇಂಡಿಯಾ ಇನ್ನಿಂಗ್ಸ್ ನಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಬ್ಯಾಟಿಂಗ್ ಮಾಡಲಿಲ್ಲ.

ಅವರ ಬದಲಿಗೆ ದೀಪಕ್ ಹೂಡಾ ಓಪನ್ ಮಾಡಿದರು.
ಇದೇ ವಿಷಯವನ್ನು ಪಂದ್ಯದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ.
ಗಾಯಕ್ವಾಡ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಹಾರ್ದಿಕ್ ಹೇಳಿದ್ದಾರೆ.
ಗಾಯಕ್ವಾಡ್ ಪಂದ್ಯದಿಂದ ದೂರ ಉಳಿದರೇ ಅವರ ಬದಲಿಗೆ ಸಂಜು ಸ್ಯಾಮ್ಸನ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯಬಹುದು.
ಅಥವಾ ರಾಹುಲ್ ತ್ರಿಪಾಠಿ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಬಹುದು.
ಉಭಯ ತಂಡಗಳ ನಡುವಿನ ಎರಡನೇ ಟಿ20 ಮಂಗಳವಾರ ಡಬ್ಲಿನ್ನಲ್ಲಿ ನಡೆಯಲಿದೆ.








