IND vs NED: ನೆದರ್ಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ 56 ರನ್ ಗಳ ಗೆಲುವು….
ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 56 ರನ್‌ಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ 2 ವಿಕೆಟ್‌ಗೆ 179 ರನ್ ಗಳಿಸಿತು. 180 ರನ್‌ಗಳ ಗುರಿ ಪಡೆದ ನೆದರ್ಲೆಂಡ್ಸ್ ತಂಡ ಉತ್ತರವಾಗಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 2 ಪಂದ್ಯಗಳಿಂದ 4 ಅಂಕಗಳೊಂದಿಗೆ ಗ್ರೂಪ್ -2ರಲ್ಲಿ ಅಗ್ರಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ 2 ಪಂದ್ಯಗಳಲ್ಲಿ 3 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಎರಡು ತಂಡಗಳ ನಡುವಿನ ಪಂದ್ಯ ಭಾನುವಾರ ನಡೆಯಲಿದೆ.
ಇನ್ನೂ ನೆದರ್ಲೆಂಡ್ಸ್ ಗೆ ಉತ್ತಮ ಆರಂಭ ಸಿಗಲಿಲ್ಲ. ಮೂರನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ವಿಕ್ರಮಜಿತ್ ಸಿಂಗ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. 5ನೇ ಓವರ್ ನಲ್ಲಿ ಅಕ್ಸರ್ ಪಟೇಲ್ ಎಸೆತದಲ್ಲಿ ಮ್ಯಾಕ್ಸ್ ಒ’ಡೌಡ್ ಅವರ ವಿಕೆಟ್ ಮತ್ತು 10 ನೇ ಓವರ್‌ನಲ್ಲಿ ಬಾಸ್ ಡಿ ಲೀಡ್ ಅವರನ್ನು ಔಟ್ ಮಾಡಿದರು. ರವಿಚಂದ್ರನ್ ಅಶ್ವಿನ್ 13ನೇ ಓವರ್‌ನಲ್ಲಿ ಕಾಲಿನ್ ಅಕರ್‌ಮನ್ ಮತ್ತು ಟಾಮ್ ಕೂಪರ್ ಅವರನ್ನು ಔಟ್ ಮಾಡಿದರು. ಮೊಹಮ್ಮದ್ ಶಮಿ 16ನೇ ಓವರ್‌ನಲ್ಲಿ ಟಿಮ್ ಪ್ರಿಂಗಲ್ ಅವರನ್ನು ಔಟ್ ಮಾಡಿದರು. 17ನೇ ಓವರ್‌ನಲ್ಲಿ ಸ್ಕಾಟ್ ಎಡ್ವರ್ಡ್ಸ್ ಅವರನ್ನು ಭುವನೇಶ್ವರ್ ಕುಮಾರ್ ಔಟ್ ಮಾಡಿದರು. ಅರ್ಷದೀಪ್ ಸಿಂಗ್ 18ನೇ ಓವರ್‌ನಲ್ಲಿ ಲೋಗನ್ ವ್ಯಾನ್ ಬೀಕ್ ಮತ್ತು ಫ್ರೆಡ್ ಕ್ಲಾಸೆನ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದರು, ಆದರೂ ಹ್ಯಾಟ್ರಿಕ್ ಸಾಧ್ಯವಾಗಲಿಲ್ಲ.
ಟೀಂ ಇಂಡಿಯಾ ಆರಂಭ ಕೂಡ ಉತ್ತಮವಾಗಿರಲಿಲ್ಲ. ಪಾಕಿಸ್ತಾನದ ವಿರುದ್ಧ ವಿಫಲವಾದ ಕೆಎಲ್ ರಾಹುಲ್ ಮೂರನೇ ಓವರ್‌ನಲ್ಲಿಯೇ ಪೆವಿಲಿಯನ್‌ಗೆ ಮರಳಿದರು. ನೆದರ್ಲೆಂಡ್ಸ್ ಪವರ್‌ಪ್ಲೇನಲ್ಲಿ ರನ್ ನೀಡದೇ ಕಟಟಿ ಈ ವೇಳೆ 9ನೇ ಓವರ್ ಗಳಲ್ಲಿ 50 ರನ್‌ಗಳು ಪೂರ್ಣಗೊಂಡವು. 10 ಓವರ್‌ಗಳಲ್ಲಿ 1 ವಿಕೆಟ್ ಪತನಗೊಂಡು 67 ರನ್ ಗಳಿಸಲಾಯಿತು. 11ನೇ ಓವರ್‌ನಲ್ಲಿ ರೋಹಿತ್ ಅರ್ಧಶತಕ ಪೂರೈಸಿ 53 ರನ್ ಗಳಿಸಿ ಔಟಾದರು.
ವಿರಾಟ್ ಕೊಹ್ಲಿ ಸತತ ಎರಡನೇ ಅರ್ಧಶತಕ ಗಳಿಸಿದರು. ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಅರ್ಧಶತಕ ಪೂರೈಸಿದರು. ಉಭಯ ತಂಡಗಳ ಆಡುವ 11ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
IND vs NED: Team India won by 56 runs against Netherlands….








