ಆ ಕ್ಯಾಚ್ ನಿಜಕ್ಕೂ ಸೂಪರ್.. ಭರತ್ ಕೀಪಿಂಗ್ ಬಗ್ಗೆ ಭಾರಿ ಮೆಚ್ಚುಗೆ
78 ಪಂದ್ಯಗಳು… 9 ಸೆಂಚರಿಗಳು, 23 ಹಾಫ್ ಸೆಂಚರಿಗಳು ಸೇರಿದಂತೆ 4,283 ರನ್ಗಳು… ಅದರಲ್ಲಿ ಒಂದು ಟ್ರಿಪಲ್ ಸೆಂಚರಿ ಕೂಡ… ಕೀಪರ್ ಆಗಿ 270 ಕ್ಯಾಚ್ಗಳು… ಇದು 28 ವರ್ಷದ ಕೋನ ಶ್ರೀಕರ್ ಭರತ್ ಅವರ ಫಸ್ಟ್ ಕ್ಲಾಸ್ ಕೇರ್ ಪ್ರದರ್ಶನ.
ತುಂಬಾ ದಿನಗಳಿಂದ ಸೀನಿಯರ್ ಟೀಂ ಪರ ಆಡಬೇಕೆಂದು ಎದುರು ನೋಡುತ್ತಿರುವ ಭರತ್ಗೆ ಇದೀಗ ಆ ಸಮಯ ಬಂದಂತೆ ಕಾಣುತ್ತಿದೆ.
ಅತ್ಯುತ್ತಮ ವಿಕೆಟ್ ಕೀಪಿಂಗ್ ಪ್ರತಿಭೆ ಜೊತೆಗೆ ಬ್ಯಾಟಿಂಗ್ನಲ್ಲಿ ಮಿಂಚುವ ಭರತ್, ಭಾರತ ಎ ತಂಡದ ಕಾಯಂ ಆಟಗಾರ.
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣಾಫ್ರಿಕಾ, ವೆಸ್ಟಿಂಡೀಸ್ಗಳಿಗೆ ಸೇರಿದ ಎ ತಂಡಗಳ ವಿರುದ್ಧ ಭರತ್ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ.
ಕಳೆದ ಕೆಲ ಸರಣಿಗಳಿಂದ ಟೀಂ ಇಂಡಿಯಾದ ಹೆಚ್ಚುವರಿ ಆಟಗಾರನಾಗಿದ್ದ ಭರತ್ ಇದೀಗ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕಾನ್ಪುರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭರತ್ ಗೆ ಅವಕಾಶ ಸಿಗದಿದ್ದರೂ, ಅನೂಹ್ಯವಾಗಿ ಬಂದ ಅವಕಾಶ ಭರತ್ ಕಡೆ ಎಲ್ಲರನ್ನೂ ನೋಡುವಂತೆ ಮಾಡಿದೆ.
ಕೆಲವೇ ದಿನಗಳ ಹಿಂದೆ ಐಪಿಎಲ್ ನಲ್ಲಿ ಆರ್ ಸಿಬಿ ಪರ ಮಿಂಚಿದ್ದ ಭರತ್ ಡೆಲ್ಲಿ ವಿರುದ್ಧದ ಕೊನೆ ಬಾಲ್ ಸಿಕ್ಸರ್ ಸಿಡಿಸಿದರು.
ಆ ಮೂಲಕ ಯಾರೀ ಭರತ್ ಎನ್ನುವಂತೆ ಮಾಡಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಕತ್ತು ನೋವಿನಿಂದ ವೃದ್ಧಿಮಾನ್ ಸಹಾ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಕ್ರೀಸ್ ಗೆ ಇಳಿಯಲಿಲ್ಲ. ಆಗ ಕೀಪಿಂಗ್ ಜವಾಬ್ದಾರಿ ಭರತ್ ಹೆಗಲಿಗೆ ಬಂತು.
ಈ ಅವಕಾಶವನ್ನು ಬಳಸಿಕೊಂಡ ಭರತ್ , ವಿಕೆಟ್ ಹಿಂದೆ ನಿಂತು ಕಿವೀಸ್ ಬ್ಯಾಟರ್ ಯಂಗ್ ಅವರನ್ನ ಪೆವಿಲಿಯನ್ ಕಳುಹಿಸಿದರು. ಈ ವೇಳೆ ಭರತ್ ಹಿಡಿದ ಕ್ಯಾಚ್ ನಿಜವಾಗಿಯೂ ಸೂಪರ್..!
ಬ್ಯಾಟ್ ಗೆ ಟಚ್ ಆಗಿ ತುಂಬಾ ಡೌನ್ ನಲ್ಲಿ ಬಂದ ಕ್ಯಾಚ್ ಅನ್ನು ಭರತ್ ಹಿಡಿಯುವಲ್ಲಿ ಯಶಸ್ವಿಯಾದರು.
ಆದ್ರೆ ಅಂಪೈರ್ ಔಟ್ ನೀಡಲಿಲ್ಲ. ಈ ವೇಳೆ ಗಟ್ಟಿ ನಂಬಿಕೆಯೊಂದಿಗೆ ರಹಾನೆ ಬಳಿ ಹೋದ ಭರತ್, ರಿವ್ಯೂ ತೆಗೆದುಕೊಳ್ಳುವಂತೆ ಮನವೊಲಿಸಿದರು. ಹಾಗೇ ಅದು ಔಟ್ ಆಗಿತ್ತು ಕೂಡ.
ಆ ನಂತರ ವಿಕೆಟ್ ಹಿಂದೆ ಮತ್ತಷ್ಟು ಚುರುಕಾಗಿದ್ದ ಭರತ್, ಟೇಲರ್ ಕ್ಯಾಚ್, ಲಾಥಮ್ನು ಸ್ಟಂಪೌಂಟ್ ಮಾಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸದ್ಯ ವೃದ್ಧಿಮಾನ್ ಸಹಾ ಕತ್ತುನೋವಿನಿಂದ ತಂಡದಿಂದ ದೂರ ಉಳಿದಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ಭರತ್ ಟೆಸ್ಟ್ ಕ್ಯಾಪ್ ತೊಡೋದು ಪಕ್ಕಾ ಎನ್ನಲಾಗುತ್ತಿದೆ.









