ಅಯ್ಯೋ ಕೊಹ್ಲಿ.. ಅಳಲಾರದೇ ನಗುವುದೆಂದರೇ ಇದೇನಾ..?
ಮುಂಬೈ : ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಭಾಗವಾಗಿ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
ಇದರೊಂದಿಗೆ ಕೊಹ್ಲಿ ಸ್ಟೈಲ್ ‘ಇನ್ನಿಂಗ್ಸ್’… ರನ್ ಗಳ ಸುನಾಮಿ ಖಾಯಂ ಎಂದು ಅಭಿಮಾನಿಗಳು ಭಾವಿಸಿದ್ದರು.
ಆದರೆ… ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಡಕೌಟ್ ಆಗಿ ಸಂಪೂರ್ಣ ನಿರಾಸೆ ಮೂಡಿಸಿದರು.
ಕಿವೀಸ್ ಸ್ಪಿನ್ನರ್ ಏಜಾಜ್ ಪಟೇಲ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದು, ಅಭಿಮಾನಿಗಳ ಆಸೆಗಳಿಗೆ ನೀರೆರಚಿದರು.
ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯ ಸುತ್ತಿದ ವಿರಾಟ್ ಎರಡನೇ ಇನ್ನಿಂಗ್ಸ್ ನಲ್ಲಿ ಕೊಂಚ ಹೇಳಿಕೊಳ್ಳುವಂತಹ ಸ್ಕೋರ್ ಗಳಿಸಿದರು.
ಇದರಿಂದ ಸಂತಸಗೊಂಡ ಅಭಿಮಾನಿಗಳು ವಿರಾಟ್ ಇಂದು ಬೃಹತ್ ಮೊತ್ತ ದಾಖಲಿಸುತ್ತಾರೆ ಎಂದು ಅಂದಾಜಿಸಿದ್ದರು.
ಆದ್ರೆ ಅದು ಕೂಡ ನಡೆಯಲಿಲ್ಲ. 84 ಎಸೆತಗಳನ್ನು ಎದುರಿಸಿದ ಕೊಹ್ಲಿ 36 ರನ್ ಗಳಿಸಿ ಔಟಾದರು. ಆದ್ರೆ ಇಲ್ಲಿ ವಿರಾಟ್ ಔಟ್ ಆದ ರೀತಿ ನಿರಾಶಾದಾಯಕವಾಗಿತ್ತು.
ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜೊತೆಗೆ ಸೆಂಚೂರಿ ಬಾರಿಸುವೆ ಅಂದುಕೊಂಡಿದ್ದೇವು, ಆದ್ರೆ ಈ ರೀತಿ ಔಟ್ ಆಗುತ್ತಿಯಾ ಅಂದುಕೊಂಡಿರಲಿಲ್ಲ.
ಅಳಲಾರದೇ ನಗುವುದೆಂದರೇ ಇದೇನಾ..? ಎನ್ನುತ್ತಾ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.
ಇದರೊಂದಿಗೆ 1-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ.