IND vs NZ : ಭಾರತ ನ್ಯೂಜಿಲೆಂಡ್ ಮೊದಲ T20 ಪಂದ್ಯ ಮಳೆಯಿಂದ ರದ್ದು..
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಭಾರತ ತಂಡ ಸರಣಿಯ ಮೊದಲ ಪಂದ್ಯವನ್ನ ಆಡಬೇಕಿತ್ತು.
ಉಭಯ ತಂಡಗಳ ಆಟಗಾರರು ಡ್ರೆಸ್ಸಿಂಗ್ ರೂಮ್ನಲ್ಲಿ ಫುಟ್ಬಾಲ್ ಆಡುತ್ತಾ ಸಮಯ ಕಳೆದಿದ್ದಾರೆ. ಇದೀಗ ಈಗ ಎರಡನೇ ಟಿ20 ನವೆಂಬರ್ 20 ರಂದು ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ.
ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು ಆದರೆ ವೆಲ್ಲಿಂಗ್ಟನ್ ನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆ ನಿಲ್ಲದ ಕಾರಣ ಸುಮಾರು ಒಂದೂವರೆ ಗಂಟೆ ನಂತರ ಪಂದ್ಯ ರದ್ದುಪಡಿಸಲು ತೀರ್ಮಾನಿಸಲಾಗಿದೆ.
IND vs NZ: India New Zealand first T20 match canceled due to rain..








