ಟೀಮ್ ಇಂಡಿಯಾ ದಾಖಲೆ ಜಯದ ಹಿಂದಿದೆ “ಸಂಖ್ಯಾಶಾಸ್ತ್ರ” Team India saaksha tv
ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮುಂಬೈ ಟೆಸ್ಟ್ ಪಂಧ್ಯ ಹಲವು ದಾಖಲೆಗಳಿಗೆ ಕಾರಣವಾಗಿದೆ.
ಅಂಕಿ ಸಂಖ್ಯೆಗಳ ಲೆಕ್ಕಾಚಾರದಲ್ಲೂ ಮುಂಬೈ ಟೆಸ್ಟ್ ಮಹತ್ವ ಪಡೆದುಕೊಂಡಿದೆ. ಹಲವು ದಾಖಲೆಗಳು ಮುಂಬೈ ಟೆಸ್ಟ್ನಲ್ಲಿ ದಾಖಲಾಗಿವೆ.
372 – ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಸಾಧಿಸಿದ ರನ್ಗಳ ಲೆಕ್ಕಾಚಾರದಲ್ಲಿ ಅತಿದೊಡ್ಡ ಜಯ.
ಈ ಹಿಂದೆ 2015ರ ದೆಹಲಿ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ337 ರನ್ಗಳ ಜಯ ಸಾಧಿಸಿತ್ತು. ನ್ಯೂಜಿಲೆಂಡ್ ಪಾಲಿಗೂ ಇದು ಹೀನಾಯ ಸೋಲು.
ಕಿವೀಸ್ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್ಬರ್ಗ್ನಲ್ಲಿ 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 358 ರನ್ಗಳ ಸೋಲನುಭವಿಸಿತು.
300- ಅಶ್ವಿನ್ ತವರಿನಲ್ಲಿ ಟೆಸ್ಟ್ ಪಂದ್ಯದಲ್ಲಿ ಪಡೆದಿರುವ ಒಟ್ಟು ವಿಕೆಟ್ಗಳ ಸಂಖ್ಯೆ. 350 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ.
ಕೇವಲ 5 ಬೌಲರ್ಗಳು ಮಾತ್ರ ತವರಿನಲ್ಲಿ 300ಕ್ಕಿಂತ ಅಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
09- ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ಪಡೆದ ಸರಣಿ ಶ್ರೇಷ್ಠ ಪ್ರಶಸ್ತಿಗಳ ಸಂಖ್ಯೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕಾಲೀಸ್ ಕೂಡ 9 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಮುತ್ತಯ್ಯ ಮುರಳೀಧರನ್ 11 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಹೊಂದಿದ್ದಾರೆ.
66- ನ್ಯೂಜಿಲೆಂಡ್ ವಿರುದ್ಧ ಅಶ್ವಿನ್ ಪಡೆದ ಟೆಸ್ಟ್ ವಿಕೆಟ್ಗಳ ಸಂಖ್ಯೆ. ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಸರಣಿಯಲ್ಲಿ ಎರಡೂ ತಂಡಗಳ ಬೌಲರ್ಗಳ ಪೈಕಿ ಅಶ್ವಿನ್ ಅಧಿಕ ವಿಕೆಟ್ ಪಡೆದಿದ್ದಾರೆ.
ಸರ್. ರಿಚರ್ಡ್ ಹ್ಯಾಡ್ಲಿ ಈ ಹಿಂದೆ 65 ವಿಕೆಟ್ ಪಡೆದಿದ್ದರು. 52- 2021ರಲ್ಲಿ ಅಶ್ವಿನ್ ಪಡೆದ ಟೆಸ್ಟ್ ವಿಕೆಟ್ಗಳ ಸಂಖ್ಯೆ.
ಕ್ಯಾಲೆಂಡರ್ ವರ್ಷದಲ್ಲಿ ಅಶ್ವಿನ್ 4ನೇ ಬಾರಿ 50 ಮತ್ತು ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. ಶೇನ್ ವಾರ್ನ್ 8 ಬಾರಿ ಈ ಸಾಧನೆ ಮಾಡಿದರು.








