IND vs PAK : ಮೆಲ್ಬೋರ್ನ್ ಪಿಚ್ ಹೇಗಿದೆ ? ದಾಖಲೆಗಳು ಏನು ಹೇಳುತ್ತವೆ…
ಕೋಟ್ಯಾಂತರ ಭಾರತೀಯರು ಕಾಯುತ್ತಿದ್ದ ಆ ಘಳಿಗೆ ಮತ್ತೆ ಬಂದಿದೆ. ಭಾರತ ಮತ್ತು ಪಾಕಿಸ್ತನ ನಡುವಿನ ಪಂದಕ್ಕೆ ಕೆಲವೇ ಕ್ಷಣಗಳು ಭಾಕಿ ಇದ್ದು, ಮೆಲ್ಬೋರ್ನ ಕ್ರೀಡಾಂಗಣದಲ್ಲಿ ಸಕಲ ತಯಾರಿಯನ್ನು ನಡೆಸಲಾಗಿದೆ.
ಇಂಡೋ ಪಾಕ್ ಕದನವನ್ನ ನೋಡಲು ಮಳೆ ರಾಯನು ಅಸ್ತು ಎಂದಿದ್ದು, ಮಳೆ ಬರುವ ಸಾಧ್ಯತೆಯೂ ಕಡಿಮೆ ಎಂದು ಮೆಲ್ಬೋರ್ನ್ ಹವಾಮಾನ ಇಲಾಖೆ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ನ ಹೈ ವೋಲ್ಟೇಜ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ನಡೆಯಲಿದೆ. ಟಾಸ್ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಮಧ್ಯಾಹ್ನ 1:00 ಗಂಟೆಗೆ ನಡೆಯಲಿದೆ. ಇದರ ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್ಸ್ಟಾರ್ನಲ್ಲಿ ನೋಡಬಹುದು.
ಮೆಲ್ಬೋರ್ನ್ ಪಿಚ್ ಹೇಗಿದೆ?
ಇನ್ನೂ ಮೆಲ್ಬೋರ್ನ್ ಪಿಚ್ ಯಾವ ರೀತಿ ವರ್ತಿಸುತ್ತದೆ ಎನ್ನುವ ಕುರಿತು ಮಾತನಾಡುವುದಾದರೇ ಎಂಸಿಜಿಯಲ್ಲಿ ಕಳೆದ 5 ಪಂದ್ಯಗಳಲ್ಲಿ ಗುರಿ ಬೆನ್ನಟ್ಟಿದ ತಂಡ ಜಯಗಳಿಸಿದೆ.
ಪಿಚ್ ನಲ್ಲಿ ಮೊದಲ ಇನಿಂಗ್ಸ್ನಲ್ಲಿ ಸರಾಸರಿ ಸ್ಕೋರ್ 145 ರನ್ ಆಗಿದೆ. ಎರಡನೇ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 140 ರನ್. ಈ ಮೈದಾನದಲ್ಲಿ ಭಾರತ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು 184 ರನ್ ಗಳಿಸಿದ ದಾಖಲೆ ಹೊಂದಿದೆ. ಈ ಮೈದಾನದಲ್ಲಿ ಪಾಕಿಸ್ತಾನದ ಸರಾಸರಿ ಸ್ಕೋರ್ 125 ರನ್. ಇಲ್ಲಿನ ಪಿಚ್ ವೇಗದ ಬೌಲರ್ಗಳಿಗೆ ನೆರವಾಗುತ್ತದೆ. ಈ ಪಿಚ್ನಲ್ಲಿ ವೇಗಿಗಳು 59 ವಿಕೆಟ್ಗಳನ್ನು ಪಡೆದಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಭಾರತದ ಮೇಲುಗೈ
ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿವೆ. ಭಾರತ ಐದು ಬಾರಿ ಗೆದ್ದಿದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋತಿತ್ತು.
ಒಟ್ಟಾರೆಯಾಗಿ, ಟಿ20 ಮಾದರಿಯಲ್ಲಿ ಉಭಯ ತಂಡಗಳ ನಡುವೆ 11 ಪಂದ್ಯಗಳು ನಡೆದಿವೆ. ಭಾರತ 7 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಟೈ ಆಗಿದೆ. ಇದರಲ್ಲಿ ಭಾರತ ಬಾಲ್ ಔಟ್ ನಲ್ಲಿ ಗೆಲುವು ಸಾಧಿಸಿತು.
IND vs PAK : How is the Melbourne pitch? What the records say…