IND vs PAk | ಲೇಡಿ ಧೋನಿ.. ಸೂಪರ್ ಸ್ಟಂಪಿಂಗ್…
ಮಹಿಳಾ ವಿಶ್ವಕಪ್‌ನ ಅಂಗವಾಗಿ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಿದೆ.
ಆದರೆ, ಈ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ರಿಚಾ ಘೋಷ್ ಮಿಂಚಿನ ವೇಗದಲ್ಲಿ ಅದ್ಭುತ ಸ್ಟಂಪಿಂಗ್ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.
ಪಾಕಿಸ್ತಾನ ಇನಿಂಗ್ಸ್ ನಲ್ಲಿ 30 ಓವರ್ ಬೌಲಿಂಗ್ ಮಾಡಿದ ರಾಜೇಶ್ವರಿ ಗಾಯಕ್ ವಾಡ್ ಬೌಲಿಂಗ್ ನಲ್ಲಿ.. ಆಲಿಯಾ ರಿಯಾಜ್ ಸ್ವಲ್ಪ ಕ್ರೀಸ್ ಬಿಟ್ಟು ಬೃಹತ್ ಹೊಡೆತಕ್ಕೆ ಯತ್ನಿಸಿದರು.
ಆದರೆ ಅದು ತಪ್ಪಿ ನೇರವಾಗಿ ವಿಕೆಟ್ ಕೀಪರ್ ರಿಚಾ ಕೈ ಸೇರಿತು. ಬಾಲ್ ಕೈಗೆ ಬರುತ್ತಿದ್ದಂತೆ ರಿಚಾ ಮಿಂಚಿನ ವೇಗದಲ್ಲಿ ಸ್ಟಂಪ್ ಗಳನ್ನು ಕೆಡವಿದರು.
ಇದರೊಂದಿಗೆ ಆಲಿಯಾ ರಿಯಾಜ್ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ರಿಚಾ ಸ್ಟಂಪಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಚಾ ಸ್ಟಂಪಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಲೇಡಿ ಧೋನಿ ಎನ್ನುತ್ತಿದ್ದಾರೆ. ind-vs-pak-india-wicketkeeper-richa-ghosh-stunning-stumping









