ind-vs-pak-match | ಅರ್ಷ್ ದೀಪ್ ಬೌಲಿಂಗ್ ಗೆ ಬೆಚ್ಚಿದ ಪಾಕ್ ಆರಂಭಿಕರು
ಟೀಂ ಇಂಡಿಯಾದ ಯುವ ಬೌಲರ್ ಅರ್ಷ್ ದೀಪ್ ಸಿಂಗ್ ದಾಳಿಗೆ ಪಾಕಿಸ್ತಾನ ತಂಡದ ಆರಂಭಿಕರು ಪೆವಿಲಿಯನ್ ಸೇರಿದ್ದಾರೆ.
ವಿಶ್ವಕಪ್ ನಲ್ಲಿ ಮೊದಲ ಪಂದ್ಯವನ್ನಾಡಿದ ಅರ್ಷ್ ದೀಪ್ ಸಿಂಗ್ ತಮ್ಮ ಮೊದಲ ಎಸೆತವನ್ನು ಅವಿಸ್ಮರಣಿಯವಾಗಿಸಿಕೊಂಡರು.
ತಮ್ಮ ಮೊದಲ ಎಸೆತದಲ್ಲಿಯೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ಎಲ್ ಬಿ ಮಾಡಿದರು.

ಇದಾದ ಬಳಿಕ ಎರಡನೇ ಓವರ್ ನಲ್ಲಿ ಮತ್ತೊಬ್ಬ ಆರಂಭಿಕ ರಿಜ್ವಾನ್ ಅವರನ್ನು ಅರ್ಷ್ ದೀಪ್ ಔಟ್ ಮಾಡಿದರು.
ಓವರ್ ನ ಕೊನೆಯ ಎಸೆತದಲ್ಲಿ ಶಾಕಿಂಗ್ ಬೌನ್ಸರ್ ಹಾಕಿದ ಅರ್ಷ್ ದೀಪ್ ಸಿಂಗ್, ರಿಜ್ವಾನ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು.
ಆ ಮೂಲಕ ಬ್ಲಾಕ್ ಬಸ್ಟರ್ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಅರ್ಷ್ ದೀಪ್ ಸಿಂಗ್ ಆಘಾತ ನೀಡಿದ್ದಾರೆ.
ಪವರ್ ಪ್ಲೇ ಅಂತ್ಯಕ್ಕೆ ಪಾಕಿಸ್ತಾನ ತಂಡ 2 ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದೆ. ಈ ಪವರ್ ಪ್ಲೇನಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದೆ.








