ಇಂಡೋ ಪಾಕ್ ಕದನಕ್ಕಾಗಿ ವರುಣ ನ ಸಹಕಾರ – ಮಳೆ ಸಾಧ್ಯತೆ ಕೇವಲ 15%
2022ರ ಟಿ20 ವಿಶ್ವಕಪ್ನ ಅತಿದೊಡ್ಡ ಹೈ ವೋಲ್ಟೇಜ್ ಮ್ಯಾಚ್ ಗೆ ವೇದಿಕೆ ಸಿದ್ದಗೊಂಡಿದೆ. ಇಂದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 1.30 ಕ್ಕೆ ಮುಖಾಮುಖಿಯಾಗಲಿದ್ದಾರೆ, ಸುಮಾರು 1 ಲಕ್ಷ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಹಾಜರಿದ್ದರೆ ಸುಮಾರು 300 ಮಿಲಿಯನ್ ಜನರು ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಆನಂದಿಸಲಿದ್ದಾರೆ.
ಭಾರತ ಪಾಕ್ ಪಂದ್ಯಕ್ಕಾಗಿ ಹವಾಮಾನ ಇಲಾಖೆಯ ಶುಭ ಸೂಚನೆ ನೀಡಿದ್ದು ಮಳೆ ಬರುವ ಸಾಧ್ಯತೆ 15% ಗೆ ಕುಸಿದಿದೆ. ಇಂದು ಬೆಳಗಿನ ಹವಾಮಾನ ನವೀಕರಣದ ಪ್ರಕಾರ, ಮೆಲ್ಬೋರ್ನ್ನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಮಳೆಯಾಗುವ ಸಾಧ್ಯತೆಯೂ ಕಡಿಮೆ ಇದೆ.
ಆಸ್ಟ್ರೇಲಿಯಾದ ಎಂಸಿಜಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ 37 ವರ್ಷಗಳ ನಂತರ ಪಂದ್ಯ ನಡೆಯಲಿದೆ. ಕೊನೆಯ ಬಾರಿಗೆ ಎರಡೂ ತಂಡಗಳು 1985 ರಲ್ಲಿ ಬೆನ್ಸನ್ ಮತ್ತು ಹೆಡ್ಜಸ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಆಡಿದ್ದವು. ಭಾರತ ತಂಡದ ನಾಯಕನಾಗಿ ಸುನಿಲ್ ಗವಾಸ್ಕರ್ ಅವರಿಗೆ ಇದು ಕೊನೆಯ ಪಂದ್ಯವಾಗಿತ್ತು. ಇದಾದ ನಂತರ ಈ ಮೈದಾನದಲ್ಲಿ ಈ ಎರಡೂ ತಂಡಗಳ ನಡುವೆ ಪಂದ್ಯ ನಡೆದಿರಲಿಲ್ಲ.
IND vs PAK : Varuna cooperation for Indo Pak battle – Chance of rain only 15%








