ind-vs-sa-2nd | ಹೈ ಸ್ಕೋರಿಂಗ್ ಮ್ಯಾಚ್ ಗೆದ್ದ ಟೀಂ ಇಂಡಿಯಾ !
ಗುವಾಹಟಿಯಲ್ಲಿ ನಡೆದ ಬೌಂಡಿರಿ, ಸಿಕ್ಸರ್ ಗಳ ಆಟದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ 20 ಪಂದ್ಯ ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಸೌತ್ ಆಫ್ರಿಕಾ ಬೌಲರ್ ಗಳ ಬೆಂಡೆತ್ತಿದ್ರು.
ಆರಂಭಿಕರಾದ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ವಿಧ್ವಂಸಕ ಆರಂಭ ನೀಡಿದರು. ರೋಹಿತ್ ಶರ್ಮಾ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಔಟ್ ಆದ್ರು,
ಇತ್ತ ಬೌಂಡರಿ ಸಿಕ್ಸರ್ ಗಳೊಂದಿಗೆ ಅಬ್ಬರಿಸುತ್ತಿದ್ದ ಕೆ.ಎಲ್.ರಾಹುಲ್ 28 ಎಸೆತಗಳಲ್ಲಿ 57 ಚಚ್ಚಿ ಮಹಾರಾಜ್ ಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಗೆ ರೋರಾ ಜೋಡಿ 96 ರನ್ ಗಳ ಜೊತೆಯಾಟವನ್ನು ನೀಡಿತು.
ರಾಹುಲ್ ಔಟ್ ಆಗುತ್ತಿದ್ದಂತೆ ಕ್ರೀಸ್ ಗೆ ಬಂದ ಸೂರ್ಯ ಕುಮಾರ್ ಯಾದವ್ ಎಂದಿನಂತೆ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದರು.
ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು. ಒಟ್ಟಾರೆ 22 ಎಸೆತಗಳಲ್ಲಿ 61 ರನ್ ಗಳಿಸಿ ರನೌಟ್ ಆದರು.
ಇನ್ನು ಸೂರ್ಯಗೆ ಸ್ಟ್ರೈಕ್ ನೀಡುತ್ತಾ ಆಂಕರಿಂಗ್ ರೋಲ್ ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡಿದರು.
ಆದ್ರೆ ಕೊನೆಯ ಮೂರು ಓವರ್ ಗಳಲ್ಲಿ ಗೇರ್ ಚೇಂಜ್ ಮಾಡಿದರು. ಕೇವಲ 28 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ನೆರವಿನಿಂದ ಅಜೇಯ 49 ರನ್ ಗಳಿಸಿದರು.
ಕೊನೆಯಲ್ಲಿ ಕ್ರೀಸ್ ಗೆ ಬಂದ ದಿನೇಶ್ ಕಾರ್ತಿಕ್ 7 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿಯೊಂದಿಗೆ 17 ರನ್ ಚಚ್ಚಿದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು.
ಗೆಲ್ಲಲು 238 ರನ್ಗಳ ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು.
6.2 ಓವರ್ಗೆ 47 ರನ್ ಗಳಿಸಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಮತ್ತು ಕ್ವಿಂಟನ್ ಡಿ ಕಾಕ್ ಮುರಿಯದ ನಾಲ್ಕನೇ ವಿಕೆಟ್ಗೆ 84 ಎಸೆತಗಳಲ್ಲಿ 174 ರನ್ ಜೊತೆಯಾಟವಾಡಿ ಗೆಲುವಿನ ಹತ್ತಿರ ತಂದರು.
ಕ್ವಿಂಟನ್ ಡಿಕಾಕ್ 67 ಎಸೆತಗಳಲ್ಲಿ 63 ರನ್ (3 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ. ಸ್ಫೋಟಕ ಶತಕ ಸಿಡಿಸಿದ ಡೇವಿಡ್ ಮಿಲ್ಲರ್ ಕೇವಲ 47 ಎಸೆತಗಳಲ್ಲಿ 106 ರನ್ (7 ಸಿಕ್ಸರ್, 8 ಬೌಂಡರಿ) ಚಚ್ಚಿ ಅಜೇಯರಾಗುಳಿಸಿದರು.
ಟೀಂ ಇಂಡಿಯಾ ಪರ ಅಕ್ಷರ್ ಪಟೇಲ್ 1 ವಿಕೆಟ್, ಅರ್ಷ್ದೀಪ್ ಸಿಂಗ್ 2 ವಿಕೆಟ್ ಕಬಳಿಸಿದರು.
Ind Vs South Africa