Ind Vs SA : ಪಾಂಡ್ಯ, ಸಂಜು ಬಗ್ಗೆ ರಾಹುಲ್ ದ್ರಾವಿಡ್ ಮೆಚ್ಚುಗೆ
ಇಂಡಿಯನ್ ಪ್ರಿಮಿಯರ್ ಲೀಗ್ 2022 ರಲ್ಲಿ ಭಾರತದ ಕ್ಯಾಪ್ಟನ್ ಗಳ ಯಶಸ್ವಿಯ ಬಗ್ಗೆ ಟೀಂ ಇಂಡಿಯಾದ ರಾಹುಲ್ ದ್ರಾವಿಡ್ ಖುಷಿ ವ್ಯಕ್ತಪಡಿಸಿದ್ದಾರೆ. ನಾಯಕರಾಗಿ ಯಶಸ್ವಿ ಸಾಧಿಸೋದು ಅಂದ್ರೆ ಒಂದು ಮೆಟ್ಟಿಲು ಮೇಲೆ ಬಂದಂತೆ ಎಂದು ಪ್ರಶಂಸಿದ್ದಾರೆ.
ಗುಜರಾತ್ ಟೈಟಾನ್ಸ್ ಗೆ ಹಾರ್ದಿಕ್ ಪಾಂಡ್ಯ, ರಾಜಸ್ಥಾನ ರಾಯಲ್ಸ್ ಗೆ ಸಂಜು ಸ್ಯಾಮ್ಸನ್, ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಶ್ರೇಯಸ್ ಅಯ್ಯರ್, ಡೆಲ್ಲಿ ಕ್ಯಾಪಿಟಲ್ಸ್ ಗೆ ರಿಷಬ್ ಪಂತ್, ಲಕ್ನೋ ಸೂಪರ್ ಜೈಂಟ್ಸ್ ಗೆ ಕೆಎಲ್ ರಾಹುಲ್ ಮತ್ತು ಪಂಜಾಬ್ ಕಿಂಗ್ಸ್ ಗೆ ಮಯಾಂಕ್ ಅಗರ್ ವಾಲ್ ಕ್ಯಾಪ್ಟನ್ ಆಗಿ ಮಿಂಚಿದ್ದಾರೆ. ಅಲ್ಲದೇ ಹಾರ್ದಿಕ್ ತಮ್ಮ ಮೊದಲ ಋತುವಿನಲ್ಲಿ ಗುಜರಾತ್ ಗೆ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ. ಇತ್ತ ಹದಿನಾಲ್ಕು ವರ್ಷಗಳ ನಂತರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಂಜು ಫೈನಲ್ ಗೇರಿಸಿದ್ದರು.

ಇನ್ನು ಕೆ.ಎಲ್.ರಾಹುಲ್ ಕೂಡ ಮೊದಲ ಎಡಿಷನಲ್ ನಲ್ಲಿಯೇ ಲಕ್ನೋ ಸೂಪರ್ ತಂಡಯನ್ನು ಪ್ಲೇ ಆಫ್ಸ್ ವರೆಗೂ ಕರೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ ರಾಹುಲ್ ದ್ರಾವಿಡ್ ಈ ನಾಯಕರ ಬಗ್ಗೆ ಮಾತನಾಡಿದ್ದು, ನನಗೆ ತಿಳಿದಂತೆ ಐಪಿಎಲ್ ನಲ್ಲಿ ಕ್ಯಾಪ್ಟನ್ ಆಗಿ ಯಶಸ್ಸು ಸಾಧಿಸೋದು ಅಂದ್ರೆ ಆಟಗಾರರು ಒಂದು ಮೆಟ್ಟಿಲು ಮೇಲೆ ಬಂದಂತೆ. ಅದು ಭಾರತ ಕ್ರಿಕೆಟ್ ಗೆ ತುಂಬಾ ಅನುಕೂಲಕರವಾಗಿದೆ. ಐಪಿಎಲ್ ನಲ್ಲಿ ನಾಯಕರಾಗಿ ಹಾರ್ದಿಕ್ ಪಾಂಡ್ಯ ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ.
ಆತ ಮತ್ತೆ ಟೀಂ ಇಂಡಿಯಾಗೆ ವಾಪಸ್ ಆಗಿದ್ದು, ಅವರು ಬೌಲಿಂಗ್ ಮಾಡುತ್ತಿರೋದು ಖುಷಿಯ ಸಂಗತಿಯಾಗಿದೆ. ಸ್ಯಾಮ್ ಸನ್, ಕೆ.ಎಲ್.ರಾಹುಲ್, ಶ್ರೇಯಸ್ ಕೂಡ ನಾಯಕರಾಗಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಜೂನ್ 9 ರಂದು ನಡೆಯಲಿದೆ.








