IND vs SA | ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ : ಪಟಿದಾರ್ ಗೆ ಅವಕಾಶ ?
ತವರಿನಲ್ಲಿ ನಡೆದ ದಕ್ಷಿಣಾಫ್ರಿಕಾ ವಿರುದ್ಧದ ಟಿ 20 ಸರಣಿಯನ್ನು ಟೀಂ ಇಂಡಿಯಾ ಗೆದ್ದಿದ್ದು, ಏಕದಿನ ಸರಣಿಗೆ ಸಿದ್ಧವಾಗಿದೆ.
ಲಕ್ನೋ ವೇದಿಕೆಯಾಗಿ ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದೆ.
ಈ ಸರಣಿಯಲ್ಲಿ ಶಿಖರ್ ಧವನ್ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಅದೇ ರೀತಿ ರಜತ್ ಪಟಿದಾರ್, ಮುಖೇಷ್ ಕುಮಾರ್ ಮೊದಲ ಬಾರಿ ಟೀಂ ಇಂಡಿಯಾದಲ್ಲಿ ಸ್ಥಾನಪಡೆದಿದ್ದಾರೆ.
ಇಂದಿನ ಪಂದ್ಯದಲ್ಲಿ ಆರಂಭಿಕರಾಗಿ ಶಿಖರ್ ಧವನ್, ಶುಭ್ ಮನ್ ಗಿಲ್ ಕಣಕ್ಕಿಳಿಯಲಿದ್ದು, ಗಿಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ.
ವಿಂಡೀಸ್, ಜಿಂಬಾಬೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಇಲ್ಲಿಯವರೆಗೂ 9 ಏಕದಿನ ಪಂದ್ಯಗಳನ್ನಾಡಿರುವ ಗಿಲ್ 499 ರನ್ ಗಳಿಸಿದ್ದಾರೆ. ಇನ್ನು ಧವನ್ ಆರು ಪಂದ್ಯಗಳಲ್ಲಿ 322 ರನ್ ಗಳಿಸಿದ್ದಾರೆ.
ಮಿಡಲ್ ಆರ್ಡರ್ ನಲ್ಲಿ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ ಸನ್, ರಾಹುಲ್ ತ್ರಿಪಾಠಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.
ಮತ್ತೊಂದು ಕಡೆ ರಜತ್ ಪಟಿದಾರ್ ಇಂದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಸಾಧ್ಯತೆಗಳಿವೆ.
ಆಲ್ ರೌಂಡರ್ ಕೋಟಾದಲ್ಲಿ ಶಹಬಾಸ್ ಅಹ್ಮದ್, ಶರ್ದೂಲ್ ಠಾಕೂರ್ ಗೆ ಚಾನ್ಸ್ ಸಿಗಲಿದೆ.
ಬೌಲರ್ ಗಳ ವಿಭಾಗದಲ್ಲಿ ಮೊಹ್ಮದ್ ಸಿರಾಜ್, ದೀಪಕ್ ಚಹಾರ್, ರವಿ ಬಿಷ್ನೋಯಿ ಅವಕಾಶ ಪಡೆಯಬಹುದು.
ಭಾರತ ಸಂಭಾವ್ಯ ತಂಡ
ಶಿಖರ್ ಧವನ್, ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಟಿದಾರ್, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ ಸನ್, ಶಹಬಾಸ್ ಅಹ್ಮದ್, ಶರ್ದೂಲ್ ಠಕೂರ್, ದೀಪಕ್ ಚಹಾರ್, ರವಿ ಬಿಷ್ಣೋಯಿ, ಮೊಹ್ಮದ್ ಸಿರಾಜ್.