IND vs SA T-20 | ಟೀಂ ಇಂಡಿಯಾ ವಿರುದ್ಧ ಆಫ್ರಿಕಾಗೆ ದಾಖಲೆಯ ಜಯ
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ ದಾಖಲೆಯ ಜಯ ಸಾಧಿಸಿದೆ.
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು.
ಟೀಂ ಇಂಡಿಯಾದ ಪರ ಇಶಾನ್ ಕಿಶಾನ್, ರುತುರಾಜ್ ಗಾಯಕ್ವಾಡ್ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಆದ್ರೆ ರುತುರಾಜ್ ಹೋರಾಟ 23 ರನ್ ಗಳಿಗೆ ಅಂತ್ಯವಾಯಿತು. ನಂತರ ಕಣಕ್ಕಿಳಿದ ಶ್ರೇಯಸ್ ಅಯ್ಯರ್ 36 ರನ್ ಹಾಗೂ ರಿಷಬ್ ಪಂತ್ 29 ರನ್ ಗಳಿಸಿದರು.
ಈ ಹಂತದಲ್ಲಿ 76 ರನ್ ಗಳಿಸಿ ಮುನ್ನಗುತ್ತಿದ್ದ ಇಶಾನ್ ಕಿಶಾನ್ ಔಟ್ ಆದರು. ಈ ವೇಳೆ ಕ್ರೀಸ್ ಗೆ ಬಂದ ಹಾರ್ದಿಕ್ ಪಾಂಡ್ಯ ಅಜೇಯ 31 ರನ್ ಗಳಿಸಿದರು. ಪರಿಣಾಮ ನಿಗದಿತ 20 ಓವರ್ ಗಳಲ್ಲಿ ಭಾರತ ತಂಡ 211 ರನ್ ಕಲೆಹಾಕಿತು.
ಭಾರತ ನೀಡಿದ 212 ರನ್ಗಳ ಕಠಿಣ ಸವಾಲು ಬೆನ್ನತ್ತಿದ ಸೌತ್ ಆಫ್ರಿಕಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿಕಾಕ್(22) ಹಾಗೂ ನಾಯಕ ತೆಂಬಾ ಬವುಮಾ(10) ಬಹುಬೇಗನೆ ನಿರ್ಗಮಿಸಿದರು.
ನಂತರ ಬಂದ ಡ್ವೇನ್ ಪ್ರಿಟೋರಿಯಸ್(29) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಆದರೆ 4ನೇ ವಿಕೆಟ್ಗೆ ಜೊತೆಯಾದ ವ್ಯಾನ್ ದರ್ ದುಸೇನ್ 75* ರನ್ ಹಾಗೂ ಡೇವಿಡ್ ಮಿಲ್ಲರ್ 64* ರನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಭಾರತದ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ ಅಜೇಯ 131 ರನ್ಗಳ ಜೊತೆಯಾಟದ ಮೂಲಕ ತಂಡವನ್ನ ಗೆಲುವಿನ ದಡಸೇರಿಸಿದರು.
ಭಾರತದ ಪರ ಭುವನೇಶ್ವರ್, ಅಕ್ಸರ್ ಹಾಗೂ ಹರ್ಷಲ್ ತಲಾ 1 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.