Ind Vs SA T20 Series : ರಾಹುಲ್ ಗೆ ಗಾಯ.. ಪಂತ್ ಗೆ ಪಟ್ಟ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ.
ಗಾಯದ ಸಮಸ್ಯೆಯಿಂದ ನಾಯಕ ಕೆಎಲ್ ರಾಹುಲ್ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ.
ರಾಹುಲ್ ಜೊತೆಗೆ ಕುಲದೀಪ್ ಯಾದವ್ ಕೂಡ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ.
ಕೆಎಲ್ ರಾಹುಲ್ ಬದಲಿಗೆ ರಿಷಬ್ ಪಂತ್ ನಾಯಕ ಹಾಗೂ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೆ.
ಪ್ರಾಕ್ಟೀಸ್ ವೇಳೆ ರಾಹುಲ್ ಕಾಲಿಗೆ ಗಾಯವಾಗಿದ್ದು, ವೈದ್ಯರ ಸಲಹೆ ಮೇರೆಗೆ ಅವರು ಈ ಸರಣಿಯಿಂದ ದೂರ ಸರಿದಿದ್ದಾರೆ.
ಅಲ್ಲದೇ ಮುಂದಿನ ಇಂಗ್ಲೆಂಡ್ ಪ್ರವಾಸ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಕೆಎಲ್ ರಾಹುಲ್ ಹಿಂದೆ ಸರಿದಿರುವುದಾಗಿ ಆಡಳಿತ ಮಂಡಳಿ ಪ್ರಕಟಿಸಿದೆ. ಕುಲದೀಪ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದಾರೆ.
ಮೊದಲ ಟಿ20: ಜೂನ್ 9 – ಗುರುವಾರ – ಅರುಣ್ ಜೇಟ್ಲಿ ಕ್ರೀಡಾಂಗಣ – ದೆಹಲಿ
ಎರಡನೇ T20: ಜೂನ್ 12 – ಭಾನುವಾರ – ಬಾರಾಬತಿ ಕ್ರೀಡಾಂಗಣ – ಕಟಕ್
ಮೂರನೇ ಟಿ20: ಮಂಗಳವಾರ, ಜೂನ್ 14 – ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ – ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ – ವಿಶಾಖಪಟ್ಟಣ
ನಾಲ್ಕನೇ T20: ಶುಕ್ರವಾರ, ಜೂನ್ 17 – ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ – ರಾಜ್ಕೋಟ್
ಐದನೇ ಟಿ20: ಜೂನ್ 19 – ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು








