Ind Vs Sl 1st T20 | ಜಸ್ಪ್ರೀತ್ ಬುಮ್ರಾ ಅವರನ್ನ ಆಡಿಸಿದ್ದು ಯಾಕೆ..?
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಆಡುತ್ತಿರುವ ಬಗ್ಗೆ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
T20 ವಿಶ್ವಕಪ್-2022 ಸಮೀಪಿಸುತ್ತಿರುವಂತೆ ಪ್ರಯೋಗಗಳನ್ನು ಮಾಡಬೇಕು ಮತ್ತು ಇತರ ಆಯ್ಕೆಗಳನ್ನು ಸಹ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳವರೆಗೂ ಅವರಿಗೆ ವಿಶ್ರಾಂತಿ ನೀಡಿದ್ದರೇ ಉತ್ತಮವೆಂದು ನೆಹ್ರಾ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ 20 ಸರಣಿಯಲ್ಲಿ ಬುಮ್ರಾ ಅವರನ್ನು ಆಡಿಸೋದನ್ನ ನೋಡಿ ನನಗೆ ಆಶ್ಚರ್ಯವಾಗಿದೆ. ಭಾರತ ತಂಡವು ಸಾಕಷ್ಟು ವೇಗದ ಬೌಲರ್ಗಳನ್ನು ಹೊಂದಿದೆ. ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು.
ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್ ಮತ್ತು ಅವೇಶ್ ಖಾನ್ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ. ಬುಮ್ರಾ ತಂಡಕ್ಕೆ ಬಂದರೆ, ಅವರಲ್ಲಿ ಹಲವರು ಬೆಂಚ್ಗೆ ಸೀಮಿತರಾಗಬೇಕಾಗುತ್ತದೆ.
ಮೆಗಾ ಟೂರ್ನಮೆಂಟ್ಗೆ ಸಿದ್ಧವಾಗುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಆಯ್ಕೆಗಳನ್ನು ಪರಿಗಣಿಸಬೇಕು ಎಂದು ನೆಹ್ರಾ ಹೇಳಿದ್ದಾರೆ.
ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ವಾಪಸಾತಿಗೆ ಸಂತಸ ವ್ಯಕ್ತಪಡಿಸಿರುವ ನೆಹ್ರಾ… ”ಜಡೇಜಾ ತಂಡಕ್ಕೆ ಮರಳಿರುವುದು ಸಂತಸ ತಂದಿದೆ. ಅವರು ಎಲ್ಲಾ ಮಾದರಿಗಳಲ್ಲಿ ಮಿಂಚಬಲ್ಲರು. ಬ್ಯಾಟಿಂಗ್ ವಿಷಯದಲ್ಲಿ ಸಾಕಷ್ಟು ಸುಧಾರಿಸಿದ್ದಾರೆ ಎಂದಿದ್ದಾರೆ.
ind-vs-sl-1st-t20-ashish-nehra-surprised-over-jasprit-bumrah-playing-t20









