ind-vs-sl-1st-test |ಲಂಕಾ ವಿರುದ್ಧ ಟೀಂ ಇಂಡಿಯಾ ವಿನ್.. Virat ಗೆ ಗೆಲುವಿನ ಗಿಫ್ಟ್
ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಜೊತೆಗೆ 222 ರನ್ ಗಳ ಗೆಲುವು ಸಾಧಿಸಿದೆ. ಆ ಮೂಲಕ ನೂರನೇ ಟೆಸ್ಟ್ ಪಂದ್ಯವಾಡಿದ ಕಿಂಗ್ ವಿರಾಟ್ ಕೊಹ್ಲಿಗೆ ರೋಹಿತ್ ಸೇನೆ ಗೆಲುವಿನ ಉಡುಗೊರೆ ಕೊಟ್ಟಿದೆ. ಇತ್ತ ಟೆಸ್ಟ್ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿಯೇ ಜಯ ಸಾಧಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ಕಳೆದುಕೊಂಡು 574 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತದ ಪರ ರಾಕ್ ಸ್ಟಾರ್ ರವೀಂದ್ರ ಜಡೇಜಾ 175 ರನ್, ವಿಕೆಟ್ ಕೀಪರ್ ರಿಷಬ್ ಪಂತ್ 96 ರನ್, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 61, ಹನುಮವಿಹಾರಿ 58 ರನ್, ವಿರಾಟ್ ಕೊಹ್ಲಿ 45 ರನ್, ಮಯಾಂಕ್ ಅಗರ್ ವಾಲ್ 33 ರನ್, ನಾಯಕ ರೋಹಿತ್ ಶರ್ಮಾ 29, ಅಯ್ಯರ್ 27, ಶಮಿ 20 ರನ್ ಗಳಿಸಿದ್ದರು.
ಇನ್ನು ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಬ್ಯಾಟರ್ ಗಳು ಟೀಂ ಇಂಡಿಯಾದ ಸ್ಪಿನ್ ಬಲೆಗೆ ಸಿಲುಕಿಕೊಂಡರು. ರವಿಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಸ್ಪಿನ್ ಜಾದೂಗೆ ಲಂಕಾ ಬ್ಯಾಟರ್ ಗಳು ಗಿರಗಿಟ್ಟಲೇ ಹೊಡೆದರು. ಲಂಕಾ ಪರ ಮೊದಲ ಇನ್ನಿಂಗ್ಸ್ ನಲ್ಲಿ ನಿಸ್ಸಾಂಕ 61 ರನ್ ಗಳಿಸಿದ್ದು ಬಿಟ್ಟರೇ ಮತ್ಯಾರು ಕ್ರೀಸ್ ನಲ್ಲಿ ನಿಲ್ಲುವ ಗೋಜಿಗೆ ಹೋಗಲಿಲ್ಲ. ಪರಿಣಾಮ ಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ 174 ರನ್ ಗಳಿಗೆ ಆಲೌಟ್ ಆಯ್ತು.
ಭಾರತ ತಂಡದ ಪರ ರವೀಂದ್ರ ಜಡೇಜಾ ಐದು ವಿಕೆಟ್ ಪಡೆದರೇ, ಬೂಮ್ರಾ, ಅಶ್ವಿನ್ ತಲಾ ಎರಡು ವಿಕೆಟ್ ಪಡೆದರು. ಶಮಿ ಒಂದು ವಿಕೆಟ್ ಪಡೆದರು.
ಇದಾದ ಬಳಿಕ ಇಂಡಿಯಾ ಲಂಕಾ ಮೇಲೆ ಫಾಲೋ ಆನ್ ಹೇರಿತು. ಆದ್ರೆ ಲಂಕಾ ಬ್ಯಾಟರ್ ಗಳು ಇಲ್ಲೂ ಪ್ರತಿರೋಧ ತೋರುವಲ್ಲಿ ವಿಫಲರಾದರು. ವಿಕೆಟ್ ಕೀಪರ್ ನಿರೋಶನ್ ಡಿಕ್ ವೆಲ್ಲಾ 51 ರನ್, ಡಿ ಸಿಲ್ವಾ 30, ಮ್ಯಾಥ್ಯೂಸ್ 28, ಕರುಣರತ್ನೆ 27, ಅಸಲಂಕಾ 20 ರನ್ ಗಳಿಸಿ ಆಟ ಮುಗಿಸಿದರು. ಅಂತಿಮವಾಗಿ ಲಂಕಾ 178ಕ್ಕೆ ಮತ್ತೆ ಆಲೌಟ್ ಆಯ್ತು. ಆ ಮೂಲಕ ಟೀಂ ಇಂಡಿಯಾ ಇನ್ನಿಂಗ್ಸ್ ಜೊತೆಗೆ 222 ರನ್ ಗಳೊಂದಿಗೆ ಪಂದ್ಯವನ್ನು ಗೆದ್ದುಕೊಂಡಿತು.
ಭಾರತದ ಪರ ಅಶ್ವಿನ್, ಜಡೇಜಾ ತಲಾ ನಾಲ್ಕು ವಿಕೆಟ್ ಪಡೆದರು. ಶಮಿ 2 ವಿಕೆಟ್ ಪಡೆದರು. ಒಟ್ಟಾರೆ ಆಲ್ ರೌಂಡರ್ ಪ್ರದರ್ಶನ ನೀಡಿದ ಜಡೇಜಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ದೊರಕಿತು.
ind-vs-sl-1st-test-India Won by an innings and 222 Run