IND vs SL 2nd T20 : ಹ್ಯಾಟ್ರಿಕ್ ನೋ ಬಾಲ್ – ಅರ್ಶದೀಪ್ ಅನಗತ್ಯ ದಾಖಲೆ
ಶ್ರೀಲಂಕಾ ವಿರುದ್ಧದ 2ನೇ T20I ಪಂದ್ಯದಲ್ಲಿ ನೀರಸ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾದ ವೇಗಿ ಅರ್ಶದೀಪ್ ಸಿಂಗ್, ಆ ಮೂಲಕ ತಮ್ಮದೇ ಹೆಸರಿನಲ್ಲಿದ್ದ ಬೇಡದ ದಾಖಲೆಯೊಂದನ್ನ ಬ್ರೇಕ್ ಮಾಡಿದ್ದಾರೆ.
ಮೊದಲ ಪಂದ್ಯದಿಂದ ಹೊರಗುಳಿದಿದ್ದ ಅರ್ಶದೀಪ್ ಸಿಂಗ್, ಪುಣೆಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ತಂಡದಲ್ಲಿ ಆಡುವ ಅವಕಾಶ ಪಡೆದರು.
ಆದರೆ ನಿರೀಕ್ಷಿತ ಬೌಲಿಂಗ್ ಪ್ರದರ್ಶಿಸುವಲ್ಲಿ ವಿಫಲವಾದ ಅರ್ಶದೀಪ್ ಸಿಂಗ್, ಮಾಡಿದ 2 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 18.50 ಎಕಾನಮಿಯೊಂದಿಗೆ 37 ರನ್ ನೀಡಿ ದುಬಾರಿ ಬೌಲಿಂಗ್ ಪ್ರದರ್ಶಿಸಿದರು.
ಅಲ್ಲದೇ ಮಾಡಿದ 2 ಓವರ್‌ನಲ್ಲಿ 5 ನೋ ಬಾಲ್ ಮಾಡಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು.
ಎರಡು ಓವರ್‌ಗಳಲ್ಲಿ 5 ನೋ ಬಾಲ್‌ಗಳನ್ನ ಮಾಡಿದ ಅರ್ಶದೀಪ್ ಸಿಂಗ್, ಭಾರತದ ಪರ ಒಂದೇ ಓವರ್‌ನಲ್ಲಿ ಹೆಚ್ಚು ನೋ ಬಾಲ್ ಗಳನ್ನ ಮಾಡಿದ ಬೌಲರ್ ಎನಿಸಿದರು.
ತಮ್ಮ ಮೊದಲ ಓವರ್‌ನಲ್ಲಿ ಕುಸಲ್ ಮೆಂಡಿಸ್ ಎದುರು ಸತತ 3 ನೋ ಬಾಲ್ ಮಾಡಿದ ಎಡಗೈ ವೇಗಿ, ಆ ಮೂಲಕ ಒಂದೇ ಓವರ್‌ನಲ್ಲಿ ಹೆಚ್ಚು ನೋ ಬಾಲ್ ಮಾಡಿ ಅನಗತ್ಯ ದಾಖಲೆ ಬರೆದರು. ಇದಾದ ಬಳಿಕ ತಮ್ಮ 2ನೇ ಓವರ್‌ನಲ್ಲೂ ಸಹ ಅರ್ಶದೀಪ್ ಸಿಂಗ್ 2 ನೋ ಬಾಲ್ ಮಾಡಿದರು.
23 ವರ್ಷದ ವೇಗದ ಬೌಲರ್ ಅರ್ಶದೀಪ್ ಸಿಂಗ್ ಈ ಹಿಂದೆ 2022ರಲ್ಲಿ ಹಾಂಗ್‌ಕಾಂಗ್ ವಿರುದ್ಧ ಒಂದೇ ಓವರ್‌ನಲ್ಲಿ 2 ನೋ ಬಾಲ್ ಮಾಡಿದ್ದರು.
ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಒಟ್ಟಾರೆ 7 ನೋ ಬಾಲ್ ಮಾಡಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.








