ಅಂತಿಮ ಏಕದಿನ ಪಂದ್ಯ : ಕನ್ನಡಿಗ ಗೌತಮ್ ಸೇರಿ ಐವರು ಪದಾರ್ಪಣೆ
ಕೊಲಂಬೊ : ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಈಗಾಗಲೇ ಸರಣಿಯನ್ನು ಕೈವಶ ಪಡಿಸಿಕೊಂಡಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದೆ.
ಕಿಶನ್ ಸ್ಥಾನಕ್ಕೆ ಸಂಜು ಸ್ಯಾಮನ್ಸ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬ್ಯಾಟ್ಸ್‍ಮನ್ ನಿತೀಶ್ ರಾಣಾ, ಸ್ಪಿನ್ನರ್ ಚೇತನ್ ಸಕಾರಿಯಾ, ಕನ್ನಡಿಗ ಆಲ್ ರೌಂಡರ್ ಕೆ. ಗೌತಮ್ ಹಾಗೂ ರಾಹುಲ್ ಚಹರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ.
ತಂಡಗಳು ಹೀಗಿವೆ :
ಟೀಂ ಇಂಡಿಯಾ : ಪೃಥ್ವಿ ಶಾ, ಶಿಖರ್ ಧವನ್ (ಕ್ಯಾಪ್ಟನ್ ), ಸಂಜು ಸ್ಯಾಮನ್ಸ್ (ವಿ.ಕೀ), ಮನೀಷ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯಾ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ ಹಾಗು ಚೇತನ್ ಸಕಾರಿಯಾ
ಶ್ರೀಲಂಕಾ: ಅವಿಷ್ಕಾ ಫನಾರ್ಂಡೊ, ಮಿನೋಡ್ ಭನುಕಾ (ವಿ.ಕೀ), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ಕ್ಯಾ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನೆ, ಅಕಿಲಾ ದಾನಂಜಯ, ದುಷ್ಮಂತ ಚಮೀರಾ ಮತ್ತು ಪ್ರವೀಣ್ ಜಯವಿಕ್ರಮಾ









