IND VS SL : ಬೆಂಗಳೂರು ಟೆಸ್ಟ್ ನಲ್ಲಿ ದಾಖಲೆ ಬರೆಯಲಿದ್ದಾರೆ ರೋಹಿತ್ ಶರ್ಮಾ..!!!
ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಲಿದ್ದಾರೆ.
ಮಾರ್ಚ್ 12 ರಿಂದ ಆರಂಭವಾಗಲಿರುವ ಈ ಪಂದ್ಯದೊಂದಿಗೆ ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಪಂದ್ಯಗಳ ಮೈಲಿಗಲ್ಲನ್ನು ತಲುಪಲಿದ್ದಾರೆ.
ಈ ಮೂಲಕ ಈ ಸಾಧನೆ ಮಾಡಿದ 35ನೇ ಅಂತಾರಾಷ್ಟ್ರೀಯ ಕ್ರಿಕೆಟಿಗ ಮತ್ತು 9ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 664 ಅಂತಾರಾಷ್ಟ್ರೀಯ ಪಂದ್ಯಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ,
ಶ್ರೀಲಂಕಾದ ಮಾಜಿ ಆಟಗಾರರಾದ ಮಹೇಲ ಜಯವರ್ಧನೆ (652), ಸಂಗಕ್ಕಾರ (594) ಮತ್ತು ಜಯಸೂರ್ಯ (586) ಕ್ರಮವಾಗಿ 2,3 ಮತ್ತು 4 ನೇ ಸ್ಥಾನದಲ್ಲಿದ್ದಾರೆ.
ಭಾರತದ ಪರ ತೆಂಡೂಲ್ಕರ್ ನಂತರದ ಸ್ಥಾನದಲ್ಲಿ ಧೋನಿ (538), ರಾಹುಲ್ ದ್ರಾವಿಡ್ (509), ವಿರಾಟ್ ಕೊಹ್ಲಿ (457), ಮೊಹಮ್ಮದ್ ಅಜರುದ್ದೀನ್ (433), ಸೌರವ್ ಗಂಗೂಲಿ (424), ಅನಿಲ್ ಕುಂಬ್ಳೆ (403), ಯುವರಾಜ್ ಸಿಂಗ್ (402) ಮತ್ತು ರೋಹಿತ್ (399) ಇದ್ದಾರೆ.
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹಿಟ್‌ಮ್ಯಾನ್, ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ 44 ಟೆಸ್ಟ್‌ಗಳು, 230 ODIಗಳು ಮತ್ತು 125 T20I ಪಂದ್ಯಗಳನ್ನು ಆಡಿದ್ದಾರೆ.
ಈ ಅನುಕ್ರಮದಲ್ಲಿ ಅವರು 41 ಶತಕ ಮತ್ತು 84 ಅರ್ಧ ಶತಕಗಳ ಸಹಾಯದಿಂದ 15672 ರನ್ ಗಳಿಸಿದ್ದಾರೆ.
ind-vs-sl-rohit-sharma-reach-400-international-matches









