Ind VS SL T20 : ಧರ್ಮಶಾಲಾದಲ್ಲಿ 2ನೇ ಗುದ್ದಾಟ.. ಸಮಬಲ ಸಾಧಿಸುತ್ತಾ ಶ್ರೀಲಂಕಾ
ಶ್ರೀಲಂಕಾ ವಿರುದ್ಧಧ ಮೂರು ಮ್ಯಾಚ್ ಗಳ ಟಿ 20 ಸರಣಿಯ ಎರಡನೇ ಪಂದ್ಯ ಇಂದು ಧರ್ಮಶಾಲಾದಲ್ಲಿ ನಡೆಯಲಿದೆ.
ಈ ಪಂದ್ಯವನ್ನು ಗೆದ್ದು ಟೀಮ್ ಇಂಡಿಯಾ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, ಶ್ರೀಲಂಕಾ ತಂಡ ಪಂದ್ಯ ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಟೀಂ ಇಂಡಿಯಾದಲ್ಲಿ ಮೊದಲ ಪಂದ್ಯದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ.
ಶ್ರೀಲಂಕಾ ತಂಡ ಹೊಸಬರನ್ನು ತುಂಬಿಕೊಂಡರೂ ಟಿ20 ಆಟಕ್ಕೆ ಬೇಕಾದ ಖಡಕ್ ಕಾಣುತ್ತಿಲ್ಲ.
ಬ್ಯಾಟಿಂಗ್ನಲ್ಲಿ ಚರಿತ್ ಅಸಲಂಕಾ ಒಬ್ಬರನ್ನು ಬಿಟ್ಟರೆ ಉಳಿದವರ ಬಳಿ ಕ್ಷಮತೆ ಕಂಡಿಲ್ಲ.
ಪಥುನ್ ನಿಸ್ಸಾಂಕ, ದಿನೇಶ್ ಚಾಂಡಿಮಲ್, ದಾಸುನ್ ಶಣಕ ಸೇರಿದಂತೆ ಪ್ರತಿಭಾನ್ವತಿರ ದಂಡೇ ಇದ್ದರೂ ತಂಡದ ಕೈ ಹಿಡಿಯುತ್ತಿಲ್ಲ.
ಬೌಲಿಂಗ್ನಲ್ಲಿ ಲಹಿರು ಕುಮಾರ, ಕರುಣರತ್ನೆ ಮತ್ತು ದುಶ್ಮಂತ್ ಚಾಮಿರಾ ಮಾತ್ರ ಅನುಭವಿಗಳು.
ಸ್ಪಿನ್ ವಿಭಾಗದ ವೈಫಲ್ಯ ಲಂಕಾ ತಂಡವನ್ನು ಕಾಡುತ್ತಿದೆ.
ಸಂಭಾವ್ಯ X1:
ಭಾರತ:
- ರೋಹಿತ್ ಶರ್ಮಾ, 2. ಇಶನ್ ಕಿಶನ್, 3. ಶ್ರೇಯಸ್ ಅಯ್ಯರ್, 4. ಸಂಜು ಸ್ಯಾಮ್ಸನ್, 5. ರವೀಂದ್ರ ಜಡೇಜಾ, 6. ದೀಪಕ್ ಹೂಡ, 7. ವೆಂಕಟೇಶ್ ಅಯ್ಯರ್, 8. ಹರ್ಷಲ್ ಪಟೇಲ್, 9. ಭುವನೇಶ್ವರ್ ಕುಮಾರ್, 10. ಜಸ್ ಪ್ರಿತ್ ಬುಮ್ರಾ, 11. ಯಜುವೇಂದ್ರ ಚಹಲ್
ಶ್ರೀಲಂಕಾ:
- ಪಥುನ್ ನಿಸ್ಸಾಂಕ, 2. ಕುಸಾಲ್ ಮೆಂಡಿಸ್, 3. ಚರಿತ್ ಅಸಲಂಕಾ, 4. ದಿನೇಶ್ ಚಾಂಡಿಮಲ್, 5. ದಾಸುನ್ ಶನಕ, 6. ಕರುಣರತ್ನೆ, 7. ದುಶ್ಮಂತ್ ಚಾಮಿರಾ, 8. ಲಹಿರು ಕುಮಾರ, 9. ಪ್ರವೀಣ್ ಜಯವಿಕ್ರಮ, 10. ಜೆಫ್ರಿ ವ್ಯಾಂಡರ್ಸೆ, 11. ಕಮಿಲ್ ಮಿಶ್ರಾ ind-vs-sl-t20- Will India recall star youngster in Dharamsala









