Ind Vs SL T20I | ಇಶಾನ್ ಕಿಶನ್ ಬೇಡ.. ರುತುರಾಜ್ ಚಾನ್ಸ್ ಕೊಡಿ
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಜತೆಗೆ ರುತ್ರಾಜ್ ಗಾಯಕ್ವಾಡ್ ಅವರನ್ನು ಕಳುಹಿಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ತವರಿನಲ್ಲಿ ಶ್ರೀಲಂಕಾ ವಿರುದ್ಧ ಮೂರು ಟಿ20 ಸರಣಿಯಲ್ಲಿ ಸೆಣಸಲಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಫೆಬ್ರವರಿ 24 ರಂದು ಲಕ್ನೋದಲ್ಲಿ ನಡೆಯಲಿದೆ. ಆದರೆ, ಗಾಯದಿಂದಾಗಿ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ಇದರೊಂದಿಗೆ ಇಶಾನ್ ಕಿಶನ್ ವೆಸ್ಟ್ ಇಂಡೀಸ್ ಸರಣಿಯಲ್ಲಿ ರೋಹಿತ್ ಆರಂಭಿಕ ಜೋಡಿಯಾಗಿ ಭಾರತದ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ, ಕಿಶನ್ ಸರಣಿಯಲ್ಲಿ ಮಿಂಚುವಲ್ಲಿ ವಿಫಲರಾಗಿದ್ದರು.
ಈ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಜತೆಗೆ ರುತ್ರಾಜ್ ಗಾಯಕ್ವಾಡ್ ಅವರನ್ನು ಕಳುಹಿಸಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ವಿಂಡೀಸ್ ವಿರುದ್ಧದ ಮೂರನೇ T20I ನಲ್ಲಿ ಆರಂಭಿಕರಾಗಿ ಬಂದ ಗಾಯಕ್ವಾಡ್ ಕೇವಲ ನಾಲ್ಕು ರನ್ ಗಳಿಸಿ ನಿರಾಸೆ ಅನುಭವಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಟೀಂ ಇಂಡಿಯಾ ಆರಂಭಿಕ ಆಟಗಾರನಾಗುವ ಅವಕಾಶ ಪಡೆದಿದ್ದರು. ಆದರೆ, ಕಿಶನ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಗಾಯಕ್‌ವಾಡ್‌ಗೆ ಕನಿಷ್ಠ ಎರಡು ಪಂದ್ಯಗಳಲ್ಲಿ ಓಪನರ್ ಆಗಿ ಆಡುವ ಅವಕಾಶ ನೀಡಬೇಕು,” ಎಂದು ಜಾಫರ್ ಪ್ರತಿಪಾದಿಸಿದ್ದಾರೆ.
ind-vs-sl-t20i-wasim-jaffer-picks-team-india-openers









