IND vs SRI ಸರಣಿ ಗೆಲುವಿಗೆ ಇಂದು ಭಾರತ, ಲಂಕಾ ಕಾದಾಟ
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸುಧಾರಿಸಿಕೊಳ್ಳಬೇಕಿರುವ ಟೀಮ್ ಇಂಡಿಯಾ ಇಂದು ಶ್ರೀಲಂಕಾ ವಿರುದ್ಧ ಮೂರನೆ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಎದುರಿಸಲಿದೆ.
ಮೊನ್ನೆ ಪುಣೆಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 16 ರನ್ಗಳ ಗೆಲುವು ದಾಖಲಿಸಿ ಸರಣಿ 1-1 ಸಮಗೊಳಿಸಿತು. ಭಾರತದ ಯುವ ಬೌಲಿಂಗ್ ಪಡೆಯ ಅಸ್ಥಿರತೆ ಸೋಲಿಗೆ ಕಾರಣವಾಗಿದೆ. ಉಮ್ರಾನ್ ಮಲ್ಲಿಕ್ ಮತ್ತು ಶಿವಂ ಮಾವಿಗೆ ಒಳ್ಳೆಯ ಅನುಭವ ಸಿಗಲಿದೆ.
ಎಡಗೈ ವೇಗಿ ಆರ್ಷದೀಪ್ ಸೇರಿದಂತೆ ಬೌಲಿಂಗ್ ಪಡೆ ಸಾಕಷ್ಟು ರನ್ ಬಿಟ್ಟುಕೊಟ್ಟಿತು. ಆರ್ಷದೀಪ್ 2 ಓವರ್ಗಳಲ್ಲಿ 5 ನೋ ಬಾಲ್ ಹಾಕಿದರು.ಮೊದಲ ಓವರ್ನ ಸತತ 3 ನೋ ಬಾಲ್ ಹಾಕಿ ಅನಗತ್ಯ ದಾಖಲೆ ಬರೆದುಕೊಂಡರು.
ಪದಾರ್ಪಣೆ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ್ದ ಶಿವಂ ಮಾವಿ ಹಾಗೂ ಆರ್ಷದೀಪ್ ಎರಡನೆ ಪಂದ್ಯದಲ್ಲಿ ಹಿಡಿತ ಕಳೆದುಕೊಂಡವರಂತೆ ಕಂಡು ಬಂದರು. ಹೀಗಾಗಿ ಲಂಕಾ ಬ್ಯಾಟರ್ಗಳನ್ನು ಕಟ್ಟಿಹಾಕಲು ತಂಡ ಸ್ಪಿನ್ನರ್ಗಳನ್ನು ನೆಚ್ಚಿಕೊಳ್ಳಬೇಕಾಯಿತು.
ಇನ್ನು ಬ್ಯಾಟಿಂಗ್ ವಿಭಾಗ ಉತ್ತಮ ಆರಂಭ ನೀಡುವಲ್ಲಿ ಮತ್ತೆ ಎಡವಿತು. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಮತ್ತೊಮ್ಮೆ ಎಡವಿದರು. ರಾಹುಲ್ ತ್ರಿಪಾಠಿ ತಮ್ಮ ಪದಾರ್ಪಣೆ ಪಂದ್ಯದಲ್ಲಿ ವಿಫಲರಾದರು.ಎರಡನೆ ಬಾರಿ ಅಗ್ರ ಕ್ರಮಾಂಕ ಕುಸಿತ ಕಂಡಿತು.
60 ರನ್ ಒಳೆಗೆ ಆಲೌಟ್ ಆಗುವ ಭೀತಿಯಲ್ಲಿದ್ದ ತಂಡಕ್ಕೆ ಸೂರ್ಯ ಕುಮಾರ್ ಮತ್ತು ಆಲ್ರೌಂಡರ್ ಅಕ್ಸರ್ ಪಟೇಲ್ 200ರ ಗಡಿಗೆ ತಂಡದ ಮೊತ್ತವನ್ನು ತೆಗೆದುಕೊಂಡು ಹೋದರು.
ಅಲ್ರೌಂಡರ್ ರವೀಂದ್ರ ಜಡೇಜಾ ಅವರ ಸ್ಥಾನಕ್ಕೆ ಅಕ್ಸರ್ ಪಟೇಲ್ ಜೀವ ತುಂಬಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಯುವ ತಂಡಕ್ಕೆ ಇನ್ನಷ್ಟು ಅವಕಾಶಗಳನ್ನು ಕೊಡಬಹುದಾಗಿದೆ.ಇಂದಿನ ಪಂದ್ಯದಲ್ಲಿ ಹೆಚ್ಚೇನು ಬದಲಾವಣೆ ಮಾಡುವುದಿಲ್ಲ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಲಂಕಾ ತಂಡ ಯಾವುದೇ ಬದಲಾವಣೆ ಮಾಡದೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಸಂಭಾವ್ಯ ತಂಡಗಳು
ಭಾರತ ತಂಡ:
ಇಶಾನ್ ಕಿಶನ್, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲ್ಲಿಕ್, ಯಜ್ವಿಂದರ್ ಚಾಹಲ್, ಆರ್ಷದೀಪ್ ಸಿಂಗ್.
ಶ್ರೀಲಂಕಾ ತಂಡ:
ಪಾಥುಮ್ ನಿಸ್ಸಾಂಕಾ, ಕುಸಾಲ್ ಮೆಂಡೀಸ್, ಭಾನುಕಾ ರಾಜಪಕ್ಸ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ ದಸುನ್ ಶನಕಾ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣರತ್ನೆ, ಮಹೀಶ್ ತೀಕ್ಷ್ಣ, ಕಸೂನ್ ರಜೀತಾ, ದಿಲ್ಶಾನ್ ಮಧು ಶನಕಾ.








