IND vs SRI ಸರಣಿ ಗೆದ್ದು , ದಾಖಲೆಗಳ ಬರೆದ ಟೀಮ್ ಇಂಡಿಯಾ..!!
ಟೀಮ್ ಇಂಡಿಯಾ ಲಂಕಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ 91 ರನ್ಗಳ ಭರ್ಜರ ಗೆಲುವು ದಾಖಲಿಸಿದೆ. ಇದರೊಂದಿಗೆ ವರ್ಷದ ಮೊದಲ ಸರಣಿ ಗೆದ್ದುಕೊಂಡಿದೆ.
ರಾಜ್ ಕೋಟ್ ಮೈದಾನದಲ್ಲಿ ಭಾರತ ತಂಡ ಸೂರ್ಯ ಕುಮಾರ್ ಯಾದವ್ ಅವರ ಶತಕದ ನೆರವಿನಿಂದ 2-1 ಅಂತರದಿಂದ ಸರಣಿ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಹಲವಾರು ದಾಖಲೆಗಳನ್ನು ಬರೆದಿದೆ.
ಲಂಕಾ ವಿರುದ್ಧ 228 ರನ್ ಕಲೆ ಹಾಕುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಭಾರತದ 5ನೇ ಅತಿ ದೊಡ್ಡ ಮೊತ್ತ ಎನಿಸಿದೆ. 2017ರಲ್ಲಿ ಲಂಕಾ ವಿರುದ್ಧ ಇಂದೋರ್ ಅಂಗಳಲದಲ್ಲಿ 260 ರನ್ ಹೊಡೆದಿದ್ದು ಗರಿಷ್ಠ ಮೊತ್ತವಾಗಿದೆ.
ಟಿ20ಯಲ್ಲಿ ಲಂಕಾ ವಿರುದ್ಧ 4 ಬಾರಿ 200ಕ್ಕೂ ಹೆಚ್ಚು ಮೊತ್ತ ದಾಖಲಿಸಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 25 ಬಾರಿ 200ಕ್ಕೂ ಹೆಚ್ಚು ಬಾರಿ ರನ್ ಗಳಿಸಿದ ಮೊದಲ ತಂಡವೆಂಬ ಹಿರಿಮೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ. 20ಕ್ಕೂ ಹೆಚ್ಚು ಬಾರಿ 200ಕ್ಕೂ ಹೆಚ್ಚು ರನ್ ಹೊಡೆದ ದ.ಆಫ್ರಿಕಾ 2ನೇ ಸ್ಥಾನದಲ್ಲಿದೆ.
ಟಿ20 ವಿಶ್ವಚಾಂಪಿಯನ್ ಇಂಗ್ಲೆಂಡ್ 18 ಬಾರಿ 200ಕ್ಕೂ ಹೆಚ್ಚು ರನ್ ಹೊಡೆದಿದೆ.
ಭಾರತಕ್ಕಿದು ಸತತ 7ನೇ ದ್ವಿಪಕ್ಷೀಯ ಟಿ20 ಸರಣಿ ಗೆಲುವಾಗಿದೆ. 2019ರ ಮಾರ್ಚ್ ನಿಂದ 20 ದ್ವಿಪಕ್ಷೀಯ ಸರಣಿಗಳನ್ನು ಆಡಿಕೊಂಡು ಬಂದಿದ್ದು 17ರಲ್ಲಿ ಗೆದ್ದಿದೆ.
2021ರ ಆತಿಥೇಯ ಲಂಕಾ ವಿರುದ್ಧ ಸರಣಿ ಸೋತಿತ್ತು. ದ.ಆಫ್ರಿಕಾ ವಿರುದ್ಧ 2019,2022ರಲ್ಲಿ ಡ್ರಾ ಸಾಧಿಸಿತ್ತು.
IND vs SRI series, team india’s records , highlights








