IND vs SRI : ಸರಣಿ ಸ್ವೀಪ್ ಮಾಡುವತ್ತ ಟೀಮ್ ಇಂಡಿಯಾ ಚಿತ್ತ..!!
ಸರಣಿ ಮೇಲೆ ಕಣ್ಣಿಟ್ಟಿರುವ ಟೀಮ್ ಇಂಡಿಯಾ ಇಂದು ಶ್ರೀಲಂಕಾ ವಿರುದ್ಧ ಎರಡನೆ ಟಿ20 ಪಂದ್ಯ ಆಡಲಿದೆ.
ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಎರಡನೆ ಪಂದ್ಯವನ್ನು ಗೆದ್ದು ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಇತ್ತ ಶ್ರೀಲಂಕಾ ತಂಡ ಎರಡನೆ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಸಲು ಹೋರಾಡಲಿದೆ.
ಮೊನ್ನೆ ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಕೊನೆಯ ಎಸೆತದಲ್ಲಿ 2 ರನ್ಗಳ ರೋಚಕ ಗೆಲುವು ದಾಖಲಿಸಿತು.
ಕಠಿಣ ಗೆಲುವನ್ನು ದಾಖಲಿಸಿರುವ ಕುರಿತು ನಾಯಕ ಹಾರ್ದಿಕ್ ಪಾಂಡ್ಯ ಸಮರ್ಥಿಸಿಕೊಂಡಿದ್ದಾರೆ.
ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ರನ್ ಮಳೆ ಸುರಿಸಬೇಕಿದೆ. ಶುಭಮನ್ ಸ್ಥಾನದಲ್ಲಿ ಆಡಲು ಋತುರಾಜ್ ಗಾಯಕ್ವಾಡ್ ಮತ್ತು ರಾಹುಲ್ ತ್ರಿಪಾಠಿ ಕಾತರರಾಗಿದ್ದಾರೆ. ಆರಂಭಿಕರಾದ ಶುಭಮನ್ ಮತ್ತು ಇಶಾನ್ ಕಿಶನ್ಗೆ ತಲಾ 3 ಪಂದ್ಯಗಳು ಆಡಲು ಅವಕಾಶ ಸಿಗಲಿದೆ.
ಎರಡನೆ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಿಂದ ಸಾಕಷ್ಟು ರನ್ ನಿರೀಕ್ಷಿಸಲಾಗಿದೆ. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಸೂರ್ಯ ಕುಮರ್ ಈ ಪಂದ್ಯದಲ್ಲಿ ಸೋಟಕ ಬ್ಯಾಟಿಂಗ್ ಮಾಡಬೇಕಿದೆ.
ಸೂರ್ಯ ಕುಮಾರ್ ಲಂಕಾ ವಿರುದ್ಧ ಚಾಣಾಕ್ಷತದಿಂದ ಬ್ಯಾಟ್ ಬೀಸಬೇಕಿದೆ. ಲಂಕಾ ತಂಡ ಮಹೇಶ್ ತೀಕ್ಷ್ಣ ಹಾಗೂ ಸ್ಪಿನ್ನರ್ ವನಿಂದು ಹಸರಂಗ ಅವರನ್ನು ನೆಚ್ಚಿಕೊಂಡಿದೆ.
ಆಲ್ರೌಂಡರ್ಗಳಾದ ದೀಪಕ್ ಹೂಡಾ ಮತ್ತು ಅಕ್ಸರ್ ಪಟೇಲ್ ಅವರ ಸ್ಪೋಟಕ ಬ್ಯಾಟಿಂಗ್ ಮೆಚ್ಚುಗೆಗೆ ಪಾತ್ರವಾಗಿತ್ತು.
ವೇಗಿ ಶಿವಂ ಮಾವಿ ಪದಾರ್ಪಣೆ ಪಂದ್ಯದಲ್ಲೆ 4 ವಿಕೆಟ್ ಪಡೆದು ಮಿಂಚು ಹರಿಸಿದ್ದಾರೆ.
ಮತ್ತೋರ್ವ ವೇಗಿ ಉಮ್ರಾನ್ ಮಲ್ಲಿಕ್ 2 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಸ್ಪಿನ್ನರ್ ಯಜ್ವಿಂದರ್ ಚಾಹಲ್ 2 ಓವರ್ಗಳಿಂದ 26 ರನ್ ಕೊಟ್ಟು ದುಬಾರಿಯಾಗಿದ್ದಾರೆ.








