Ind Vs WI 1st T20 : ದೀಪಕ್ ಹೂಡಾ ಪರ ಕೃಷ್ಣಮಾಚಾರಿ ಬ್ಯಾಟಿಂಗ್
ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಎಲ್ಲರ ಗಮನ ಸೆಳೆದಿದ್ದಾರೆ.
ಆದ್ರೆ ವಿಂಡೀಸ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ತೀವ್ರ ನಿರಾಸೆ ಮೂಡಿಸಿದರು.
ಟಿ 20 ಕ್ರಿಕೆಟ್ ನಲ್ಲಿ ಅಯ್ಯರ್ ಗೆ ಕಾಂಪಿಟೇಟರ್ಸ್ ಆಗುತ್ತಿರುವ ದೀಪಕ್ ಹೂಡಾ, ಸಂಜು ಸ್ಯಾಮ್ ಸನ್ ಅವರನ್ನ ಬೇಡ ಎಂದುಕೊಂಡು ಟೀಂ ಮ್ಯಾನೇಜ್ ಮೆಂಟ್ ಶ್ರೇಯಸ್ ಗೆ ಮಣೆ ಹಾಕಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಅಯ್ಯರ್ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡರು.
ಇದು ಹೀಗಿದ್ದರೇ ದೀಪಕ್ ಹೂಡಾ ಐರ್ಲೇಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಅಬ್ಬರಿಸಿದ್ದು ಮಾತ್ರವಲ್ಲದೇ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ರೂ ಅವರಿಗೆ ಟೀಂ ಮ್ಯಾನೇಜ್ ಮೆಂಟ್ ಮಣೆ ಹಾಕಲೇ ಇಲ್ಲ.

ಈ ವಿಚಾರದ ಬಗ್ಗೆ ಸ್ಪಂದಿಸಿದ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ಸೆಲೆಕ್ಷನ್ ಕಮಿಟಿಯ ಮಾಜಿ ಚೇರ್ಮನ್ ಕೃಷ್ಣಮಾಚಾರಿ ಶ್ರೀಕಾಂತ್, ಹೂಡಾಗೆ ತಂಡದಲ್ಲಿ ಅವಕಾಶ ನೀಡಬೇಕಾಗಿತ್ತು ಎಂದು ಅಭಿಪ್ರಾಯಟ್ಟಿದ್ದಾರೆ.
ಚುಟುಕು ಕ್ರಿಕೆಟ್ ನಲ್ಲಿ ಆಲ್ ರೌಂಡರ್ ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂದ ಶ್ರೀಕಾಂತ್, ಹೂಡಾಗೆ ಅಂತಿಮ ತಂಡದಲ್ಲಿ ಸ್ಥಾನ ಯಾಕೆ ನೀಡಿಲ್ಲ ಅಂತಾ ಪ್ರಶ್ನಿಸಿದ್ದಾರೆ.
ಹೂಡಾ ಎಲ್ಲಿ..? ಇತ್ತೀಚೆಗೆ ಟಿ 20 ಮ್ಯಾಚ್ ಗಳಲ್ಲಿ ಮಾತ್ರವಲ್ಲದೇ ಏಕದಿನ ಕ್ರಿಕೆಟ್ ನಲ್ಲೂ ಅದ್ಭುತವಾಗಿ ಮಿಂಚುತ್ತಿದ್ದಾರೆ. ಹೂಡಾ ಖಂಡಿತ ತಂಡದಲ್ಲಿರಬೇಕಾದ ವ್ಯಕ್ತಿ.
ಟಿ 20 ಕ್ರಿಕೆಟ್ ನಲ್ಲಿ ಆಲ್ ರೌಂಡರ್ ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ ಅಲ್ವಾ..? ಬ್ಯಾಟಿಂಗ್ ಆಲ್ ರೌಂಡರ್ ಗಳಾದ್ರೂ ಬೌಲಿಂಗ್ ಆಲ್ ರೌಂಡರ್ ಗಳಾದ್ರೂ ಪರವಾಗಿಲ್ಲ. ಒಟ್ಟಾರೆ ತಂಡದಲ್ಲಿ ಆಲ್ ರೌಂಡರ್ ಗಳು ಇರಲೇಬೇಕು ಎಂದಿದ್ದಾರೆ.








