Virat Kohli | 8, 18, 0, 17.. ಈ ಪಂದ್ಯದಲ್ಲಾದ್ರೂ ಕಾಣುತ್ತಾ ವಿರಾಟ ರೂಪ ind-vs-wi-2nd-t20 virat kohli batting saaksha tv
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಬಳಿಕ ಇದೀಗ ಟಿ20 ಸರಣಿಯನ್ನೂ ಗೆಲ್ಲಲು ಭಾರತ ತಂಡ ಸಜ್ಜಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎಲ್ಲಾ ಮೂರು ಏಕದಿನ ಪಂದ್ಯಗಳನ್ನು ಹಾಗೂ ಮೊದಲ ಟಿ20 ಪಂದ್ಯವನ್ನು ಗೆದ್ದಿದೆ.
ಸದ್ಯದ ಫಾರ್ಮ್ ನೋಡಿದ್ರೆ ಟೀಂ ಇಂಡಿಯಾ ಟಿ 20 ಸರಣಿಯನ್ನೂ ಕೈವಶ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಏಕದಿನ ಕ್ರಿಕೆಟ್ ಗೆ ಹೋಲಿಸಿದರೆ ಟಿ20ಯಲ್ಲಿ ವಿಂಡೀಸ್ ತಂಡದಲ್ಲಿ ಬಿಗ್ ಹಿಟ್ಟರ್ ಗಳೇ ತುಂಬಿಕೊಂಡಿದ್ದಾರೆ. ಆದ್ರೆ ಫಲಿತಾಂಶ ಮಾತ್ರ ಬದಲಾಗುತ್ತಿಲ್ಲ.
ಸದ್ಯ ಗೆಲುವಿನ ಅಲೆಯಲ್ಲಿರುವ ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡುವುದು ಕಷ್ಟ. ಆದರೂ ಟಿ 20 ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳ ನಿರೀಕ್ಷೆ ಮಾಡಬಹುದು.
ರೋಹಿತ್, ಇಶಾನ್ ಕಿಶನ್, ಪಂತ್, ಸೂರ್ಯಕುಮಾರ್ ಮತ್ತು ವೆಂಕಟೇಶ್ ಅಯ್ಯರ್ ಅವರ ಸ್ಥಾನ ಭದ್ರವಾಗಿದೆ.
ವಿರಾಟ್ ಕೊಹ್ಲಿ ಅವರ ಫಾರ್ಮ್ ಮಾತ್ರ ಸ್ವಲ್ಪ ತ್ರಾಸದಾಯಕವಾಗಿದೆ. ವಿಂಡೀಸ್ ವಿರುದ್ಧ ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಕೊಹ್ಲಿ 8, 18, 0, 17 ರನ್ ಗಳಿಸಿದ್ದಾರೆ.
ಹೀಗಾಗಿ ವಿರಾಟ್ ಕೊಹ್ಲಿಗೆ ಬಿಗ್ ಇನ್ನಿಂಗ್ಸ್ ನ ಅವಶ್ಯಕತೆ ಇದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಿಂಚಲೇಬೇಕು.
ಸದ್ಯ ರನ್ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಮಿಂಚಿದರೇ ಟೀಕಾಕರಿಗೆ ಉತ್ತರ ಕೊಟ್ಟಂತೆ ಆಡುತ್ತದೆ.