Ind Vs WI 2nd T20 : ವಿರಾಟ್ ಅರ್ಧಶತಕ.. ವಿಶ್ವ ದಾಖಲೆ ಜಸ್ಟ್ ಮಿಸ್
ವೆಸ್ಟ್ ಇಂಡೀಸ್ ವಿರುದ್ದಧ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಅರ್ಧಶತಕ ಸಿಡಿಸಿದ್ರೂ ವಿಶ್ವದಾಖಲೆ ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ. ind-vs-wi-2nd-t20-virat-kohli miss world record saaksha tv
ಈ ಪಂದ್ಯದಲ್ಲಿ 41 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ, 52 ರನ್ ಗಳನ್ನು ಬಾರಿಸಿದರು. ಇದರಲ್ಲಿ 7 ಬೌಂಡರಿಗಳು, ಒಂದು ಸಿಕ್ಸರ್ ಇತ್ತು.
ಇದಾದ ಬಳಿಕ ವಿರಾಟ್ ಛೇಜ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಈ ಹಾಫ್ ಸೆಂಚೂರಿ ಮೂಲಕ ವಿರಾಟ್ ಹಲವು ಟೀಕೆಗಳಿಗೆ ಉತ್ತರ ನೀಡಿದರು.
ಮತ್ತೊಂದೆಡೆ ಕೊಹ್ಲಿ 52 ರನ್ ಬಾರಿಸಿದ್ರೂ ವಿಶ್ವದಾಖಲೆಯನ್ನು ತಪ್ಪಿಸಿಕೊಂಡರು. ಇನ್ನು 23 ರನ್ ಗಳಿಸಿದರೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ನಿರ್ಮಿಸುತ್ತಿದ್ದರು.
ಇನ್ನು ವಿಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಕೇವಲ 24 ರನ್ ಗಳಿಸಿದ್ದರು.
ಈ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದ್ರೆ ಶುಕ್ರವಾರದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎಲ್ಲವುದಕ್ಕೂ ಫುಲ್ ಸ್ಟಾಪ್ ಇಟ್ಟರು.