IND Vs WI 3rd ODI: ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಟೀಂ ಇಂಡಿಯಾ
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದೆ.
ಡಕ್ವರ್ಥ್ ಲೂಯಿಸ್ ಪದ್ದತಿಯಲ್ಲಿ ಭಾರತ ನೀಡಿದ 257 ರನ್ ಗಳ ಗುರಿಯನ್ನ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 137 ರನ್ ಗಳಿಗೆ ಸರ್ವಪತನಗೊಂಡಿತು.
ಇದರೊಂದಿಗೆ ಟೀಂ ಇಂಡಿಯಾ 119 ರನ್ ಗಳ ಗೆಲುವು ಸಾಧಿಸಿತು.
ವೆಸ್ಟ್ ಇಂಡೀಸ್ ಪರ ಬ್ರಾಂಡನ್ ಕಿಂಗ್ 42, ನಿಕೋಲಸ್ ಪೂರನ್ 42, ಹೋಪ್ 22 ರನ್ ಗಳನ್ನು ಗಳಿಸಿದ್ರು. ಇನ್ನುಳಿದ ಬ್ಯಾಟರ್ ಗಳು ಎರಡಂಕಿ ದಾಟುವಲ್ಲಿ ವಿಫಲರಾದರು.
ಭಾರತದ ಪರ ಬೌಲಿಂಗ್ ನಲ್ಲಿ ಯಜುವೇಂದ್ರ ಚಹಾಲ್ ನಾಲ್ಕು ವಿಕೆಟ್ ಪಡೆದು ಮಿಂಚಿದ್ರೆ ಸಿರಾಜ್, ಶರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಪಡೆದರು.
ಅಕ್ಷರ್ ಪಟೇಲ್, ಪ್ರಸಿದ್ಧ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.

ಪೋರ್ಟ್ ಆಫ್ ಸ್ಪೇಯಿನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತ್ತು.
ಅದರಂತೆ ಆರಂಭಿಕರಾಗಿ ಬಂದ ಶಿಖರ್ ಧವನ್ ಮತ್ತು ಶುಭ್ ಮನ್ ಗಿಲ್ ಉತ್ತಮ ಆರಂಭ ನೀಡಿದ್ರು.
ಇವರು ಮೊದಲ ವಿಕೆಟ್ ಗೆ 113 ರನ್ ಗಳ ಜೊತೆಯಾಟವನ್ನು ನೀಡಿದ್ರು.
ಧವನ್ 58 ರನ್ ಗಳಿಸಿ ನಿರ್ಗಮಿಸಿದ್ರೆ ಶುಭ್ ಮನ್ ಗಿಲ್ 98 ರನ್ ಗಳಿಸಿ ಔಟ್ ಆದ್ರು.
ಆ ಮೂಲಕ ಚೊಚ್ಚಲ ಶತಕದಿಂದ ವಂಚಿತರಾದ್ರು. ಭಾರತ ಬ್ಯಾಟಿಂಗ್ ಮಾಡುವಾಗ ಎರಡು ಬಾರಿ ಮಳೆ ಅಡ್ಡಿಪಡಿಸಿದ್ದು, ಪಂದ್ಯವನ್ನು 36 ಓವರ್ ಗಳಿಗೆ ಸೀಮಿತಗೊಳಿಸಿದ್ರು.
ಇನ್ನು ಭಾರತದ ಪರ ಶ್ರೇಯಸ್ ಅಯ್ಯರ್ 44 ರನ್ ಗಳಿಸಿದ್ರೆ ಸೂರ್ಯ ಕುಮಾರ್ ಯಾದವ್ ಎಂಟು ರನ್ ಗಳಿದ್ರು.
ಒಟ್ಟಾರೆ ಭಾರತ ಕ್ರಿಕೆಟ್ ತಂಡ 36 ಓವರ್ ಗಳಿಗೆ 225 ರನ್ ಗಳಿಸಿತ್ತು.








