IND vs WI: ಇಂಗ್ಲೆಂಡ್ TO ವೆಸ್ಟ್ ಇಂಡೀಸ್ : ಬಿಸಿಸಿಐ ಖರ್ಚು ಮಾಡಿದ್ದೇಷ್ಟು ಗೊತ್ತಾ ?
ಇಂಗ್ಲೆಂಡ್ ಜೊತೆ ಏಕದಿನ ಸರಣಿ ಮುಗಿಸಿದ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸಿದ್ದು ಗೊತ್ತೇ ಇದೆ.
ಇಂಗ್ಲೆಂಡ್ ಜೊತೆ ಕೊನೆಯ ಏಕದಿನ ಪಂದ್ಯದ ಮುಗಿದ ಬಳಿಕ 16 ಮಂದಿ ಆಟಗಾರರ ಭಾರತ ತಂಡ ಪ್ರತ್ಯೇಕ ವಿಮಾನದಲ್ಲಿ ಮ್ಯಾಂಚಸ್ಟರ್ ನಿಂದ ಪೋರ್ಟ್ ಆಫ್ ಸ್ಪೇನ್ ಗೆ ಸೇರಿದೆ.
ಆದ್ರೆ ಇಂಗ್ಲೆಂಡ್ ನಿಂದ ವಿಂಡೀಸ್ ಗೆ ಭಾರತ ಆಟಗಾರರು ಹೋಗುವುದಕ್ಕೆ ಬಿಸಿಸಿಐ ಭಾರಿ ಖರ್ಚು ಮಾಡಿದೆ.
ಆಟಗಾರರು ಹೊರಟ ಚಾರ್ಟೆರ್ಡ್ ಫ್ಲೈಟ್ ಗೆ ಬಿಸಿಸಿಐ ಸುಮಾರು 3.5 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ.

ಆಟಗಾರರೊಂದಿಗೆ ಅವರ ಕುಟುಂಬ, ಸಹಾಯಕ ಸಿಬ್ಬಂದಿಗಳು ಹೆಚ್ಚಾಗಿ ಇರುವ ಕಾರಣದಿಂದಾಗಿ ಚಾರ್ಟೆರ್ಡ್ ಫ್ಲೈಟ್ ಬುಕ್ ಮಾಡಬೇಕಾಯ್ತು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಮ್ಯಾಂಚೆಸ್ಟರ್ ನಿಂದ ಪೋರ್ಟ್ ಆಫ್ ಸ್ಪೇನ್ ಗೆ ಭಾರತ ಆಟಗಾರರನ್ನು ಹೊತ್ತೋಯ್ದ ಚಾರ್ಟೆರ್ಡ್ ಫ್ಲೈಟ್ ಗಾಗಿ ಬಿಸಿಸಿಐ 3.5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಸಾಮಾನ್ಯವಾಗಿ ಕಮರ್ಷಿಯಲ್ ಫ್ಲೈಟ್ ನಲ್ಲಿ ಈ ಖರ್ಚು ಸುಮಾರು 2 ಕೋಟಿ ರೂಪಾಯಿ ಮಾತ್ರವಾಗುತ್ತದೆ.
ಆದ್ರೆ ಚಾರ್ಟೆರ್ಡ್ ಫ್ಲೈಟ್ ಗಾಗಿ ಹೆಚ್ಚಾಗಿ 1.5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ಇನ್ನು ವಿಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಏಕದಿನ, ಐದು ಟಿ 20 ಪಂದ್ಯಗಳನ್ನಾಡಲಿದೆ.
ಜುಲೈ 22ರಿಂದ ಏಕದಿನ ಸರಣಿ ನಡೆಯಲಿದೆ.








