IND VS WI: ಓಪನರ್ಸ್ ಕೊರತೆ.. ರೋಹಿತ್ ಗೆ ಜೋಡಿ ಯಾರು..? ind-vs-wi-ishan-kishan-added-odi-squad saaksha tv
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಕೊರೊನಾ ಸೋಂಕು ತಲ್ಲಣ ಸೃಷ್ಠಿ ಮಾಡಿದೆ. ಆರಂಭಿಕರಾದ ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ನವದೀಪ್ ಸೈನಿ, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವರು ಪಾಸಿಟಿವ್ ಆಗಿದ್ದಾರೆ.
ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆರಂಭಿಕರ ಕೊರತೆ ಉಂಟಾಗಲಿದೆ. ಕೊರೊನಾ ಸೋಂಕು ಕಾರಣದಿಂದಾಗಿ ಧವನ್, ರುತುರಾಜ್, ವೈಯುಕ್ತಿಕ ಕಾರಣಗಳಿಂದಾಗಿ ಕೆ.ಎಲ್.ರಾಹುಲ್ ಮೊದಲ ಏಕದಿನ ಪಂದ್ಯದಿಂದ ದೂರ ಉಳಿಯಲಿದ್ದಾರೆ.
ಹೀಗಾಗಿಯೇ ಬಿಸಿಸಿಐ ಮಯಾಂಕ್ ಅಗರ್ವಾಲ್ ಅವರಿಗೆ ಬುಲಾವ್ ನೀಡಿದೆ. ಆದ್ರೆ ಬಿಸಿಸಿಐ ನಿಯಮಗಳ ಪ್ರಕಾರ, ಮಯಾಂಕ್ ಮೂರು ದಿನಗಳವರೆಗೆ ಐಸೋಲೇಷನ್ ನಲ್ಲಿ ಇರಬೇಕಾಗುತ್ತದೆ. ಅವರು ಭಾನುವಾರ ತಂಡಕ್ಕೆ ಲಭ್ಯವಾಗಲಿದ್ದಾರೆ.

ಹಾಗಾಗಿ ಬಿಸಿಸಿಐ ಪ್ಲಾನ್ ಬಿ ಮಾಡಿಕೊಂಡಿದ್ದು, ಟಿ20 ಸ್ಪೆಷಲಿಸ್ಟ್ ಇಶಾನ್ ಕಿಶನ್ ಬ್ಯಾಕಪ್ ಓಪನರ್ ಆಗಿ ಏಕದಿನ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮೊದಲ ಏಕದಿನ ಪಂದ್ಯದವರೆಗೆ ಇಶಾನ್ ಕಿಶನ್, ರೋಹಿತ್ ಮತ್ತು ಮಯಾಂಕ್‌ಗೆ ಬ್ಯಾಕ್‌ಅಪ್ ಓಪನರ್ ಆಗಿರುತ್ತಾರೆ.
ಎರಡನೇ ಏಕದಿನ ಪಂದ್ಯಕ್ಕೆ ಕೆಎಲ್ ರಾಹುಲ್ ಲಭ್ಯರಾದರೆ, ಇಶಾನ್ ಅವರನ್ನು ಟಿ20 ತಂಡಕ್ಕೆ ವಾಪಸ್ ಕಳುಹಿಸಲಾಗುತ್ತದೆ. ಮಯಾಂಕ್ ಮೊದಲ ಏಕದಿನ ಪಂದ್ಯದಲ್ಲಿ ಆಡದೇ ಇದ್ದರೆ.. ಇಶಾನ್ ಕಿಶನ್ ಕಣಕ್ಕೆ ಇಳಿಯುವ ಲಕ್ಷಣ ಗೋಚರಿಸುತ್ತಿದೆ. ಯಾಕೆಂದರೆ ಇಶಾನ್ ಕಿಶನ್ ಈಗಾಗಲೇ ಬಯೋಬಾಬುಲ್ ನಲ್ಲಿದ್ದಾರೆ.
ಇಶಾನ್ ಕಿಶನ್ ಶ್ರೀಲಂಕಾ ನೆಲದಲ್ಲಿ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ 42 ಎಸೆತಗಳಲ್ಲಿ 59 ರನ್ ಗಳಿಸಿದ್ದರು. ನಂತರದ ಏಕದಿನ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದ್ದ ಇಶಾನ್ ಕಿಶನ್ ಕ್ಲೀನ್ ಬೌಲ್ಡ್ ಆದರು. ಅವರು 5 ಟಿ20 ಪಂದ್ಯಗಳಲ್ಲಿ 113 ರನ್ ಗಳಿಸಿದ್ದಾರೆ.








