ind-vs-wi-t20 | ಕೊಹ್ಲಿ ಔಟ್… ವಿಂಡೀಸ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ
ಇಂಗ್ಲೆಂಡ್ ಪ್ರವಾಸ ಮುಗಿಸಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದೆ. ಅಲ್ಲಿ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ನಿಯಮಿತ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜುಲೈ 22 ರಿಂದ 27 ರವರೆಗೆ ಏಕದಿನ ಸರಣಿ ನಡೆಯಲಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್ ಮತ್ತು ಟೀಂ ಇಂಡಿಯಾ ನಡುವಿನ ಟಿ 20 ಸರಣಿ ಜುಲೈ 29 ರಿಂದ ಪ್ರಾರಂಭವಾಗಲಿದೆ.
ಈ ಟಿ 20 ಸರಣಿಗೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಸೈಡ್ ಲೈನ್ ಮಾಡಲಾಗಿದೆ.
ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿರುವ ಕೊಹ್ಲಿ ಅವರು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳಲಿದೆ.

ಹೀಗಾಗಿ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಆದ್ರೆ ಅವರು ಬ್ಯಾಡ್ ಫಾರ್ಮ್ ನಲ್ಲಿರುವ ಕಾರಣ ಅವರನ್ನ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
ಇದು ಹೀಗೆ ಮುಂದುವರೆದರೇ ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ತಂಡದಿಂದಲೂ ವಿರಾಟ್ ಗೆ ಗೇಟ್ ಪಾಸ್ ನೀಡುವ ಸಾಧ್ಯತೆಗಳಿವೆ.
ಇನ್ನು ಚುಟುಕು ಕ್ರಿಕೆಟ್ ಕೆ.ಎಲ್.ರಾಹುಲ್, ಕುಲ್ ದೀಪ್ ಯಾದವ್ ಕಂ ಬ್ಯಾಕ್ ಆಗಿದ್ದಾರೆ.
ತಂಡ ಹೀಗಿದೆ
ರೋಹಿತ್ ಶರ್ಮಾ, ಇಶಾನ್ ಕಿಶನ್, ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವೀಂದ್ರನ್ ಅಶ್ವಿನ್, ರವಿ ಬಿಷ್ನೋಯಿ, ಕುಲ್ ದೀಪ್ ಯಾದವ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
https://twitter.com/BCCI/status/1547501290489614338?s=20&t=fMJm_Zb2WSiMcjdrWZB1Rw








