Ind VS Zim 1st ODI: ಅವರಿಬ್ಬರೇ ಆರಂಭಿಕರು.. ಇಶಾನ್ ಗೆ ನೋ ಚಾನ್ಸ್.. ತ್ರಿಪಾಠಿ ಪದಾರ್ಪಣೆ
ಕೆ.ಎಲ್.ರಾಹುಲ್ ಸಾರಥ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮೊದಲ ಏಕದಿನ ಪಂದ್ಯಕ್ಕಾಗಿ ತಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದ್ದಾರೆ.
ಕೆ.ಎಲ್.ರಾಹುಲ್, ಶಿಖರ್ ಧವನ್ ತಂಡದಲ್ಲಿರುವ ಕಾರಣ ಶುಭ್ ಮನ್ ಗಿಲ್ ಗೆ ತಂಡದಲ್ಲಿ ಅವಕಾಶವಿಲ್ಲ ಎಂದಿರುವ ಆಕಾಶ್ ಚೋಪ್ರಾ, ಇಶನ್ ಕಿಶನ್ ಗೆ ತಂಡದಲ್ಲಿ ಸ್ಥಾನ ಇರೋದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಅವರು ಪಾದಾರ್ಪಣೆ ಮಾಡುವ ಅವಕಾಶವಿದೆ. ಮಿಡಲ್ ಆರ್ಡರ್ ನಲ್ಲಿ ಸಂಜು ಸ್ಯಾಮ್ ಸನ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ ಸ್ಥಾನ ಪಡೆಯಲಿದ್ದಾರೆ.

ಅದೇ ರೀತಿ ಮೊದಲ ಪಂದ್ಯಕ್ಕಾಗಿ ಇಬ್ಬರು ಸ್ಪಿನ್ನರ್, ಮೂವರು ವೇಗಿಗಳು ಕಣಕ್ಕಿಳಿದರೇ ಚೆನ್ನಾಗಿರುತ್ತದೆ ಎಂದು ಭಾವಿಸಿದ್ದಾರೆ.
ಸ್ಪಿನ್ ವಿಭಾಗದಲ್ಲಿ ಅಕ್ಷರ್ ಪಟೇಲ್, ಕುಲ್ ದೀಪ್ ಯಾದವ್. ವೇಗಿಗಳ ವಿಭಾಗದಲ್ಲಿ ದೀಪಕ್ ಚಹಾರ್, ಮೊಹ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಅಂತಿಮ ತಂಡದಲ್ಲಿ ಇರಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕೆ.ಎಲ್.ರಾಹುಲ್ ವಿಲಕ್ಷಣವಾದ ಬ್ಯಾಟರ್. ಯಾವ ಸ್ಥಾನದಲ್ಲಿದ್ದಾರೂ ಆತ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್ ಬಳಿಕ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.
ಆದರೂ ರಾಹುಲ್ ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿಯಬೇಕು, ಮೂರನೇ ಸ್ಥಾನದಲ್ಲಿ ಶುಭ್ ಮನ್ ಗಿಲ್ ಕ್ರೀಸ್ ಗೆ ಬರಬೇಕು ಎಂದಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ ಸನ್, ದೀಪಕ್ ಹೂಡಾ ಐದು, ಆ ನಂತರ ರಾಹುಲ್ ತ್ರಿಪಾಠಿ ಎಂದಿದ್ದಾರೆ.
ಆಕಾಶ್ ಚೋಪ್ರಾ ತಂಡ
ಕೆ.ಎಲ್.ರಾಹುಲ್, ಶಿಖರ್ ಧವನ್, ಶುಭ್ ಮನ್ ಗಿಲ್, ಸಂಜು ಸ್ಯಾಮ್ ಸನ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಅಕ್ಷರ್ ಪಟೇಲ್, ದೀಪಕ್ ಚಹಾರ್, ಕುಲ್ ದೀಪ್ ಯಾದವ್, ಮೊಹ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.








