ಜಿಂಬಾಬ್ವೆ ವಿರುದ್ಧ ಗೆಲುವು.. ಟೀಂ ಇಂಡಿಯಾ ದಾಖಲೆ
ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಗಳ ಸುನಾಮಿಯನ್ನು ಕಟ್ಟಿದೆ.
ಗುರುವಾರ ಹರಾರೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೆ.ಎಲ್.ರಾಹಲ್ ಪಡೆ ಜಿಂಬಾಬ್ವೆ ಮೇಲೆ 10 ವಿಕೆಟ್ ಗಳ ಅಂತರದೊಂದಿಗೆ ಘನ ವಿಜಯ ಸಾಧಿಸಿದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಸಾಕಷ್ಟು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಟೀಂ ಇಂಡಿಯಾ ಓಪನರ್ ಗಳಾದ ಧವನ್, ಶುಭ್ ಮನ್ ಗಿಲ್ ಹೊಸ ದಾಖಲೆ ಸೃಷ್ಠಿಸಿದ್ದಾರೆ.
10 ವಿಕೆಟ್ ಗಳ ಅಂತರದೊಂದಿಗೆ ಗೆಲುವು ಸಾಧಿಸಿದ ಸಂದರ್ಭದಲ್ಲಿ ಅತ್ಯಧಿಕ ರನ್ ಗಳ ಜೊತೆಯಾಟವನ್ನು ನಮೂದಿಸಿದ ಪಟ್ಟಿಯಲ್ಲಿ ಇವರಿಬ್ಬರು ಎರಡನೇ ಸ್ಥಾನದಲ್ಲಿದ್ದಾರೆ.

ಇನ್ನು ಮೊದಲ ಸ್ಥಾನದಲ್ಲಿ ಜಿಂಬಾಬ್ವೆ ಮೇಲೆ 1998ರಲ್ಲಿ ಷಾರ್ಜಾದಲ್ಲಿ ನಡೆದ ಪಂದ್ಯದಲ್ಲಿ 197 ರನ್ ಗಳ ಮೊದಲ ವಿಕೆಟ್ ಜೊತೆಯಾಟವಾಡಿದ್ದರು.
ಇನ್ನು ಟೀಂ ಇಂಡಿಯಾಗೆ ಏಕದಿನ ಕ್ರಿಕೆಟ್ ನಲ್ಲಿ 200ಗಿಂತ ಕಡಿಮೆ ಗುರಿ ಮುಟ್ಟುವಲ್ಲಿ ಒಂದೇ ಒಂದೇ ವಿಕೆಟ್ ಕಳೆದುಕೊಳ್ಳದೇ ಗುರಿ ಮುಟ್ಟಿದ್ದು, ಎಂಟನೇ ಬಾರಿ.
ಜಿಂಬಾಬ್ವೆ ಮೇಲೆ ಭಾರತಕ್ಕೆ ಇದು ಸತತವಾಗಿ 13 ನೇ ಗೆಲುವಾಗಿದೆ. ಇದಕ್ಕೂ ಮೊದಲು ಬಾಂಗ್ಲ ಮೇಲೆ ಭಾರತ ಸತತ 12 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ ಮೇಲೆ 11 ಪಂದ್ಯಗಳಲ್ಲಿ ಗೆಲುವು.








